ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾರಿನಿ ಮೇಲೆ ಕುಳಿತ ಕಾಗೆ ! ಶಕುನ-ಅಪಶಕುನದ ಲೆಕ್ಕಾಚಾರ ಆರಂಭ

Pinterest LinkedIn Tumblr

cm-car

ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ನೌಕರರು ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನಿ ಮೇಲೆ ಕುಳಿತ ಕಾಗೆಯೊಂದನ್ನು ಸಿಬ್ಬಂದಿ ಓಡಿಸಲು ಯತ್ನಿಸಿದರು ಕದಲದೆ ಇದ್ದ ಘಟನೆ ಗುರುವಾರ ಸಿಎಂ ಅಧಿಕೃತ ನಿವಾಸ ಕೃಷ್ಣದಲ್ಲಿ ನಡೆದಿದೆ.

ಈ ಘಟನೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಪಶಕುನ ಎಂದು ಕೆಲವು ಹೇಳಿದರೆ, ಇನ್ನು ಕೆಲವರು ಇದು ಕಾಕತಾಳೀಯ ಎಂದಿದ್ದಾರೆ.

ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಸಿಎಂ ನಿಗದಿತ ಕಾರ್ಯಕ್ರಮಕ್ಕೆ ತೆರಳಲು ತಮ್ಮ ಅಧಿಕೃತ ನಿವಾಸ ಕೃಷ್ಣದಿಂದ ಹೊರಬಂದಾಗ ಕಾಗೆಯೊಂದು ಕಾರಿನ ಮೇಲೆ ಕುಳಿತಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಕಾಗೆಯನ್ನು ಓಡಿಸಲು ಪ್ರಯತ್ನಿಸಿದ್ದರು. ಅದರೆ ಕಾಗೆ ಮಾತ್ರ ಕದಲಲಿಲ್ಲ. ಈ ವೇಳೆ ವಿಚಲಿತರಾದ ಸಿಎಂ 10 ನಿಮಿಷಗಳ ಕಾದು ನಂತರ ಕಾರಿನಲ್ಲಿ ತೆರಳಿದ್ದಾರೆ.

ಶಾಸ್ತ್ರವನ್ನು ಪರಿಗಣಿಸಿದರೆ ಕಾಗೆ ಶನೀಶ್ವರ ದೇವರ ವಾಹನ ,ಹಿಂದೂ ಧಾರ್ಮಿಕ ಪದ್ದತಿಯಂತೆ ಕಾಗೆಯಲ್ಲಿ ಒಳ್ಳೆಯ ಶಕ್ತಿ ಇದೆ ಎಂದು ತಿಳಿದವರು ಇದ್ದಾರೆ. ಕಾಗೆಯ ಮೇಲೆ ನಂಬಿಕೆಗಳು ಬಹಳ ಇವೆ.

Comments are closed.