ರಾಷ್ಟ್ರೀಯ

ಕೇವಲ 650 ಗ್ರಾಂ ತೂಕದ ಕಂದಮ್ಮನ ಜೀವರಕ್ಷಣೆ ಮಾಡಿದ ವೈದ್ಯರು!

Pinterest LinkedIn Tumblr

Preemie-baby

ತೆಲಂಗಾಣ: ವೈದ್ಯೋ ನಾರಾಯಣೋ ಹರಿ ಎನ್ನುವ ಮಾತು ಪುಟ್ಟ ಕಂದಮ್ಮ ರಿಶಿತಾ ಬಾಳಲ್ಲಿ ನಿಜವಾಗಿದೆ. ಸಾವಿನ ಅಂಚಿನಲ್ಲಿದ್ದ ಕಂದಮ್ಮ ಇಂದು ವೈದ್ಯರಿಂದ ಜೀವದಾನ ಪಡೆದಿದೆ.

ಹೌದು. ತೆಲಂಗಾಣದ ರಿಶಿತಾ ಹುಟ್ಟಿದಾಗ ಕೇವಲ 650 ಗ್ರಾಂ ಇದ್ದಳು. ಇನ್ನೇನೂ ಸಾವಿನ ಬಾಗಿಲು ತಟ್ಟಿದ್ದ ಈ ಮಗುವನ್ನು ಉಳಿಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಆದ್ರೂ ಪ್ರಯತ್ನಕ್ಕೆ ಕೈಹಾಕಿದ ವೈದ್ಯರು ಪವಾಡಸದೃಶವಾಗಿ ಮಗುವಿನ ಜೀವರಕ್ಷಣೆ ಮಾಡಿದ್ದಾರೆ.

ಪೋಷಕರ ನಿರ್ಲಕ್ಷ್ಯ: ರಿಶಿತಾ ಇಷ್ಟು ಕಡಿಮೆ ತೂಕದಲ್ಲಿ ಹುಟ್ಟಲು ಒಂದು ರೀತಿಯಲ್ಲಿ ಪೋಷಕರೇ ಕಾರಣವೆನ್ನಬಹುದು. ಯಾಕಂದ್ರೆ ತೀರ ಬಡತನದ ಕುಟುಂಬವಾದ್ದರಿಂದ ಗರ್ಭಿಣಿಯಾಗಿದ್ದಾಗ ರಿಶಿತಾ ತಾಯಿ ಯಾವುದೇ ಆರೋಗ್ಯ ಸಲಹೆ ಪಡೆದಿಲ್ಲ. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದಿಲ್ಲ. ಹೀಗಾಗಿ ಮಗು 650 ಗ್ರಾಂ ತೂಕವಷ್ಟೇ ಮಗು ಬೆಳವಣಿಗೆಯಾಗಿತ್ತು.

650 ಗ್ರಾಂ ಇದ್ದ ರಿಶೀತಾ ಇದೀಗ ವೈದ್ಯರ ಶತ ಪ್ರಯತ್ನದಿಂದ 2.5 ಕೆಜಿ ತೂಕ ಹೊಂದಿದ್ದಾಳೆ. ಈ ಬಗ್ಗೆ ಹರ್ಷವ್ಯಕ್ತಪಡಿಸುವ ಮಗುವಿಗೆ ಚಿಕಿತ್ಸೆ ನೀಡಿದ ಡಾ, ದಮೇರಾ ಯಡೈ, ರಿಶಿತಾಳಂತ ಮಗು ಬದುಕುಳಿದಿರುವುದು ನಮಗೂ ಪವಾಡವೆನಿಸಿದೆ ಎಂದಿದ್ದಾರೆ.

Comments are closed.