ಕರ್ನಾಟಕ

ತಮಿಳಿನಲ್ಲಿ ಕಿಚ್ಚ ಸುದೀಪ್‍ಗೆ ಮಗಧಿರ ಚೆಲುವೆ ಕಾಜಲ್ ಅಗರ್‍ವಾಲ್ ಜೋಡಿ !

Pinterest LinkedIn Tumblr

sudip

ಚೆನ್ನೈ: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಇದೀಗ ಕಾಲಿವುಡ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದು, ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪವರ್‍ಫುಲ್ ಸ್ಟೋರಿಗಳಿಂದಲೇ ಫೇಮಸ್ ಆಗಿರುವ ನಿರ್ದೇಶಕರಾಗಿರುವ ಕೃಷ್ಣ ವಂಶಿ ಅವರ ನಕ್ಷತ್ರಂ ಚಿತ್ರದಲ್ಲಿ ಸುದೀಪ್ ನಾಯಕನಾಗಿ ನಟಿಸುತ್ತಿದ್ದು, ಕಿಚ್ಚನಿಗೆ ಮಗಧಿರ ಚೆಲುವೆ ಕಾಜಲ್ ಅಗರ್‍ವಾಲ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಪೊಲೀಸ್ ಅಧಿಕಾರಿಯ ಕತೆಯಾಗಿದ್ದು, ಮೊದಲಿನಿಂದಲೂ ಪೊಲೀಸ್ ಆಗಬೇಕೆಂದು ಕನಸು ಕಾಣುತ್ತಿದ್ದ ಹುಡುಗ ಪೊಲೀಸ್ ಅಧಿಕಾರಿ ಆದ ನಂತರ ಏನೇನು ಆಗುತ್ತದೆ ಎನ್ನುವದೇ ಚಿತ್ರದ ಕಥೆಯಾಗಿದೆ. ಸುದೀಪ್ ಅಲ್ಲದೇ ಪ್ರಕಾಶ್ ರಾಜ್ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ಬಣ್ಣಹಚ್ಚಲಿದ್ದಾರೆ.

Comments are closed.