ಕರಾವಳಿ

ಲವ್..ಸೆಕ್ಸ್..ದೋಖಾ.. ಅನುಮಾನದಿಂದ ಪ್ರಿಯತಮೆಗೆ ಕೈಕೊಟ್ಟು ಅರೆಸ್ಟ್ ಆದ ಕುಂದಾಪುರ ಕಾಳಾವರದ ಯುವಕ

Pinterest LinkedIn Tumblr

*ಯೋಗೀಶ್ ಕುಂಭಾಸಿ
ಕುಂದಾಪುರ: ವರ್ಷಗಳಿಂದ ಪ್ರೀತಿಸಿದ ಯುವಕ ತಂದೆ-ತಾಯಿಲ್ಲದ ತಬ್ಬಲಿ ಯುವತಿಯ ಬಾಳಿಗೆ ಕೊಳ್ಳಿ ಇಡಲು ಹೊರಟಿದ್ದಾನೆ. ಆತನನ್ನು ನಂಬಿ, ಪ್ರೇಮಿಸಿ ತನ್ನ ಸರ್ವಸ್ವವನ್ನು ಒಪ್ಪಿಸಿದ ಈಕೆಯನ್ನು ಆ ಅನಿಮಾನದ ಪಿಶಾಚಿ ಮದುವೆಯಾಗಲು ನಿರಾಕರಿಸಿದ್ದಾನೆ. ಕೊನೆಗೂ ದಿಕ್ಕು ತೋಚದ ಆಕೆ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ.

IMG-20160601-WA0088

ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ನಿವಾಸಿ ಶರತ್ ದೇವಾಡಿಗ (22) ಯುವತಿಯೊಂದಿಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟು ಜೈಲು ಸೇರಿದ ಆರೋಪಿ. ಈತ ಕಾಳಾವರ ಸಮೀಪದ ಸಳ್ವಾಡಿಯಲ್ಲಿ ರಿಕ್ಷಾ ಚಾಲಕ.

ರಿಕ್ಷಾ ಚಾಲಕನೊಂದಿಗೆ ಪ್ರೇಮಾಂಕುರ..
ಕೋಟೆಶ್ವರ ಆಸುಪಾಸಿನ ಊರೊಂದರಲ್ಲಿ ವಾಸವಿದ್ದ ಈಕೆಗೆ ತಂದೆ ತಾಯಿ ಇಲ್ಲದ ಕಾರಣ ತನ್ನ ಮಾವನ ಜೊತೆ ಈಕೆ ವಾಸಿಸುತ್ತಿದ್ದಳು. ಒಂದಷ್ಟು ವಿದ್ಯಾಭ್ಯಾಸ ಮಾಡಿದ ಬಳಿಕ ತನ್ನ ಖರ್ಚಿಗಾದರೂ ಹಣ ಸಂಪಾದನೆ ಮಾಡಬೇಕೆಂದು ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಅದಾಗಲೇ ಆಕೆ ಹೋಗಿ ಬರುತ್ತಿದ್ದ ಮಾರ್ಗದಲ್ಲಿ ಪರಿಚಿತನಾದವನೇ ಶರತ್ ದೇವಾಡಿಗ ಎಂಬ ರಿಕ್ಷಾ ಚಾಲಕ. ಒಂದಷ್ಟು ದಿನದ ಬಳಿಕದ ಇವರಿಬ್ಬರ ಸ್ನೇಹವೆಂಬುದು ಪ್ರೇಮಕ್ಕೆ ತಿರುಗಿದೆ. ಒಬ್ಬರನ್ನೊಬ್ಬರು ನಿತ್ಯವೂ ನೋಡಲಾಗದೇ ಇರುವಷ್ಟು ಆತ್ಮೀಯರು ಆಗಿದ್ದಾರೆ.

ಬೀಚಲ್ಲಿ ಲವ್ವಿ-ಡವ್ವಿ,..ವಿಚಾರಿಸಿದ ಪೊಲೀಸರು!!
ಹಾಯ್…ಬಾಯ್ ಎಂತಿದ್ದ ಇವರಿಬ್ಬರ ಸ್ನೇಹ ಬರಬರುತ್ತಾ ಪ್ರೇಮಕ್ಕೆ ಕನ್ವರ್ಟ್ ಆಗಿದೆ. ಪ್ರೇಮಾಂಕುರವಾದ ಮೇಲೆ ಇವರಿಬ್ಬರು ಸುತ್ತದ ಜಾಗವೂ ಇಲ್ಲ..ಹೋಗದ ಸ್ಥಳವೂ ಇಲ್ಲವಂತೆ. ಅದೊಂದು ದಿನ ಗಂಗೊಳ್ಳಿ ಸಮೀಪದ ತ್ರಾಸಿಯ ಮರವಂತೆ ಬೀಚಿನಲ್ಲಿ ಇವರಿಬ್ಬರ ಸರಸ ಸಲ್ಲಾಪ ಆಗುತ್ತಿದ್ದ ವೇಳೆಯೇ ಗಂಗೊಳ್ಳಿ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಿದ್ದರು. ಆದಾಗ ಇಬ್ಬರೂ ತಮ್ಮನ್ನು ಮದುವೆಯಾಗುವ ಬಾವೀ ಜೋಡಿಗಳೆಂದು ಪರಿಚಯಿಸಿಕೊಂಡಿದ್ದರಂತೆ. ಮದುವೆಯಾಗುವ ಜೋಡಿಗಳು ಎಂಬ ಕಾರಣ ಪೊಲೀಸರು ಇಬ್ಬರನ್ನು ಬಿಟ್ಟು ಕಳಿಸಿದ್ದರಂತೆ.

ನಾಲ್ಕು ಬಾರಿ ನಡೆಸಿದ್ದ ದೈಹಿಕ ಸಂಪರ್ಕ..
ಹೀಗೆ ನಡೆದ ಇವರಿಬ್ಬರ ಪ್ರೇಮ ಪ್ರಸಂಗ ಇಷ್ಟಕ್ಕೆ ಮುಗಿದಿರಲಿಲ್ಲ. ಮದುವೆಯಾಗುವ ಸಂಪೂರ್ಣ ಭರವಸೆ ನೀಡಿದ ಶರತ್ ತನ್ನ ಪ್ರೇಯಸಿಯ ವಿರೋಧದ ನಡುವೆಯೂ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಕಾಳವಾರದ ಆಸುಪಾಸಿನಲ್ಲಿ ನಡೆಸಿದ್ದ. ಹೆದರಿಸಿ ಬೆದರಿಸಿ ಆತ ನಾಲ್ಕು ಬಾರೀ ತನ್ನೊಡನೇ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆಕೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

Jpeg

ಕೊನೆಗೂ ಕೈಕೊಟ್ಟ ಸೈಕೋ….
ನೋಡಲು ಶಿಳ್ಳೆಕ್ಯಾತನಂತಿರುವ ಶರತ್ ಮೊದಲಿನಿಂದಲೂ ತನ್ನ ಪ್ರೇಯಸಿಯ ಜೊತೆ ಅನುಮಾನ ಪಿಶಾಚಿಯಂತೆಯೇ ವರ್ತಿಸಿದ್ದ ಎನ್ನಲಾಗಿದೆ. ಅತನಿಗೆ ಅದೇನು ಬೇಕಿತ್ತೋ ಅದು ಕೊನೆಗೂ ಸಿಕ್ಕು ಅತ ತ್ರಪ್ತನಾಗಿದ್ದ. ಆತನಿಗೆ ಈಕೆಯೊಂದಿಗೆ ಸಾಂಸಾರಿಕ ಜೀವನ ನಡೆಸುವ ಉದ್ಡೆಶವೂ ಇರಲಿಲ್ಲ. ಅದಕೆ ಆತನಿಗೆ ಕಾರಣವೊಂದು ಬೇಕಿತ್ತು. ಅದಕ್ಕೆ ಬೇಕಾದ ಉಪಾಯವೊಂದನ್ನು ಹೂಡಿ ಆಕೆಯನ್ನು ಬಲವಂತವಾಗಿ ಬೆಳಗಾಂ ಸಮೀಪದ ಗೋಕಾಕ್ ಎಂಬಲ್ಲಿಗೆ ಕಳುಹಿಸುತ್ತಾನಂತೆ. ಆದರೇ ಅಲ್ಲಿಯೇ ಆಕೆಯೊಂದಿಗೆ ಬೇರೊಬ್ಬನ ಜೊತೆ ಸಂಪರ್ಕ ಕಲ್ಪಿಸಿ ಡ್ರಾಮ ಮಾಡಿದ ಆತ ಕೊನೆಗೂ ಆಕೆಯನ್ನು ಮದುವೆಯಾಗಲ್ಲ ಎಂಬ ಹಠಕ್ಕೆ ಬೀಳುತ್ತಾನೆ.

ಪ್ರೇಮಿಸಿದ ಪ್ರಿಯತಮ ತನ್ನನ್ನು ನಿರಾಕರಿಸಿ ಮದುವೆಗೆ ಒಪ್ಪುತ್ತಿಲ್ಲವೆಂಬುದನ್ನು ಅರಿತ ಪ್ರಿಯಕರೆ ಕೊನೆಗೂ ದಾರಿ ಕಾಣದೇ ಪೊಲೀಸ್ ಠಾಣೆ ಮೆಟ್ಟಿಲ್ಲನ್ನು ಏರಿದ್ದಾಳೆ.ಆರೋಪಿ ಶರತ್ ವಿರುದ್ಧ ನಂಬಿಸಿ ಅತ್ಯಾಚಾರ ಹಾಗೂ ಮೋಸ ಪ್ರಕರಣವನ್ನು ದಾಖಲಿಸಿದ್ದಾಳೆ.

ಆಕೆ ದೂರಿನ ಅನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.