
ಮೈಸೂರು: ಮೊಬೈಲ್ ಮೂಲಕ ನೆರೆಯ ಮನೆಯ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಮನಸ್ಥಿತಿಯ ವ್ಯಕ್ತಿಯನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.
ಬೋಗಾದಿ ನಿವಾಸಿ ದೇವಯ್ಯ (35) ಬಂಧಿತ ಆರೋಪಿ. ಈತ ಮೂಲತಃ ಸಾಹುಕಾರಹುಂಡಿ ಗ್ರಾಮದವನಾಗಿದ್ದು ಬೋಗಾದಿಯಲ್ಲಿ ಬಾಡಿಗೆ ಮನೆಯಲ್ಲಿ ಈತ ವಾಸವಾಗಿದ್ದಾನೆ. ತಾನು ಬಾಡಿಗೆಗೆ ಇರುವ ಮೊದಲ ಅಂತಸ್ತಿನ ಮನೆ ನೆಲವು ಮರದಿಂದ ಕೂಡಿದ್ದು ಕೆಳಗಿನ ಮನೆಯಲ್ಲಿ ಬಾಡಿಗೆಗೆ ಇರುವ ಸಂಸಾರದ ಚಲನವಲನಗಳನ್ನು ಈತ ಮೊಬೈಲ್ ಮೂಲಕ ಚಿತ್ರೀಕರಣ ಮಾಡಲು ಮೊಬೈಲ್ ಕ್ಯಾಮರಾ ಅಡಗಿಸಿಟ್ಟಿದ್ದ ಎಂಬ ದೂರಿನ ಹಿನ್ನೆಲೆಯಲ್ಲಿ ದೇವಯ್ಯನನ್ನು ಬಂಧಿಸಿರುವ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಥಳಿಯರೇ ಇದ್ದನ್ನ ಗಮನಿಸಿ ಪೊಲೀಸರಿಗೆ ವಿಕೃತ ಮನಸ್ಥಿತಿವುಳ್ಳ ದೇವಯ್ಯನನ್ನ ತಂದೊಪ್ಪಿಸಿದ್ದಾರೆ. ಆರೋಪಿ ದೇವಯ್ಯನ ಮೊಬೈಲ್ ನಲ್ಲಿ ಮಹಿಳೆಯರ ಅಶ್ಲೀಲ ಚಿತ್ರಗಳು, ವಿಡಿಯೋಗಳು ಕೂಡ ಪತ್ತೆಯಾಗಿವೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿತ ದೇವಯ್ಯನನ್ನ ವಿಚಾರಣೆ ನಡೆಸುತ್ತಿದ್ದಾರೆ.
Comments are closed.