ಕರ್ನಾಟಕ

ತಿಥಿ ಕನ್ನಡ ಸಿನೆಮ ಬಗ್ಗೆ ಗುಣಗಾನ ಮಾಡಿದ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಹೇಳಿದ್ದೇನು..?

Pinterest LinkedIn Tumblr

thithi-amir

ಬೆಂಗಳೂರು: ರಾಮ್ ರೆಡ್ಡಿ ನಿರ್ದೇಶನದ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ‘ತಿಥಿ’ ಸಿನೆಮಾ ನೋಡಿ ಬಂದ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸಿನೆಮಾವನ್ನು ಹಾಡಿ ಹೊಗಳಿದ್ದಾರೆ.

ಸಿನೆಮಾದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅಮೀರ್ “ಗೆಳೆಯರೆ ಈಗಷ್ಟೇ ದೀರ್ಘ ಕಾಲದ ನಂತರ ಒಂದು ಅದ್ಭುತ ಸಿನೆಮಾ ಕಂಡೆ, ತಿಥಿ” ಎಂದು ಟ್ವೀಟ್ ಮಾಡಿದ್ದಾರೆ.

“ಇದು ಕನ್ನಡ ಸಿನೆಮಾ ಆದರೆ ಇಂಗ್ಲಿಶ್ ನಲ್ಲಿ ಸಬ್ ಟೈಟಲ್ ಗಳಿವೆ. ಜೂನ್ ೩ಕ್ಕೆ ಬಿಡುಗಡೆಯಾಗಲಿದೆ, ನೋಡಲೇಬೇಕಾದ ಸಿನೆಮಾ” ಎಂದು ಕೂಡ ಅವರು ಬರೆದಿದ್ದಾರೆ.

ಅಷ್ಟಕ್ಕೇ ನಿಲ್ಲದ ಪಿಕೆ ನಟ “ನಂಬಲಾಗದ ನಟನೆ. ಅದೂ ಯಾರೂ ವೃತ್ತಿಪರ ನಟರಲ್ಲ. ಇಂತದೇ ವಿಭಾಗ ಎಂದು ಸೇರಿಸಲು ಕಷ್ಟ, ಆದರೆ ಹಾಸ್ಯಮಯ ಚಿತ್ರ ತಪ್ಪಿಸಿಕೊಳ್ಳಲೇಬೇಡಿ, ಪ್ರೀತಿಯಿಂದ” ಎಂದು ಅಮೀರ್ ಬರೆದಿದ್ದಾರೆ.

ಈರೇಗೌಡ ಕಥೆ ರಚಿಸಿ ರಾಮ್ ರೆಡ್ಡಿ ನಿರ್ದೇಶಿಸಿದ್ದ ಈ ಸಿನೆಮಾ ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಜೂನ್ ೩ ರಂದು ರಾಷ್ಟ್ರಾದ್ಯಂತ ತೆರೆಕಾಣಲಿರುವ ಈ ಸಿನೆಮಾವನ್ನು ಹಾಲಿವುಡ್ ನಿರ್ದೇಶಕ ಗಾಡ್ ಫಾದರ್ ಖ್ಯಾತಿಯ ಫ್ರಾನ್ಸಿಲ್ ಕಪೋಲಾ, ಬಾಲಿವುಡ್ ನಿರ್ದೇಶಕ ಗ್ಯಾಂಗ್ಸ್ ಆಫ್ ವಸೀಪುರ್ ಖ್ಯಾತಿಯ ಅನುರಾಗ್ ಕಶ್ಯಪ್ ಮತ್ತು ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಕೂಡ ಪ್ರಶಂಸಿಸಿ ಮಾತನಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Comments are closed.