ರಾಷ್ಟ್ರೀಯ

ಪರೀಕ್ಷಾರ್ಥ ಓಡಾಟ ಆರಂಭಿಸಿದ ಹೈಸ್ಪೀಡ್ ಸ್ಪ್ಯಾನಿಶ್ ಟಾಲ್ಗೋ ರೈಲು

Pinterest LinkedIn Tumblr

speed

ನವದೆಹಲಿ: ಹೈ ಸ್ಪೀಡ್ ಸ್ಪ್ಯಾನಿಶ್ ಟಾಲ್ಗೋ ರೈಲಿನ ಪರೀಕ್ಷಾರ್ಥ ಓಡಾಟ ಸೋಮವಾರ ಆರಂಭಗೊಂಡಿದೆ.

ಪ್ರಸ್ತುತ ಪರೀಕ್ಷಾರ್ಥ ಓಡಾಟ ಆರಂಭಿಸಿರುವ ಈ ರೈಲು ಗಂಟೆಗೆ 110-115 ಕಿ.ಮೀ ವೇಗದಲ್ಲಿ ಓಡಾಟ ನಡೆಸಲಿದ್ದು, ಭಾನುವಾರದಿಂದ ಉತ್ತರಪ್ರದೇಶದ ಬರೇಲಿ-ಮೊರಾದಾಬಾದ್ ನಡುವೆ ಪರೀಕ್ಷಾರ್ಥ ಓಡಾಟ ನಡೆಸಿದೆ.

ಲೈಟರ್ ಹಾಗೂ ಫಾಸ್ಟರ್ ರೈಲು ಇದಾಗಿದ್ದು, ಒಟ್ಟು 9 ಕೋಚ್ ಗಳನ್ನು ಒಳಗೊಂಡಿದೆ. 4,500 ಹೆಚ್ ಡೀಸೆಲ್ ಎಂಜಿನ್ ರೈಲಿಗೆ ಅವಶ್ಯಕವಿದ್ದು, ಪರೀಕ್ಷಾರ್ಥ ಪ್ರಯೋಗದ ವೇಳೆಯು 70 ನಿಮಿಷಗಳಲ್ಲಿ 90 ಕಿ.ಮೀ ದೂರ ಕ್ರಮಿಸಲಿದೆ.

ಬೆಳಿಗ್ಗೆ 9.05ರ ಗಂಟೆಗೆ ಬರೇಲಿಯಿಂದ ಹೊರಟ ಈ ಹೈಸ್ಪೀಟ್ ರೈಲು 10.15ಕ್ಕೆ ಮೊರದಾಬಾದ್ ತಲುಪಿದೆ. ಗಂಟೆಗೆ 100 ರಿಂದ 115 ಕ್ರಮಿಸುವ ಈ ಸಾಮರ್ಥ್ಯವನ್ನು ಹೊಂದಿರುವ ಈ ರೈಲು 2 ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್ ಗಳು, 4 ಚೇರ್ ಕಾರ್, 1 ಕ್ಯಾಫೆಟಿರಿಯಾ, 1 ಪವರ್ ಕಾರ್, ಸಿಬ್ಬಂದಿ ಮತ್ತು ಉಪಕರಣಗಳ ಕೋಚ್ ಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೂನ್ 12 ರವರೆಗೆ ಈ ರೈಲು ಇದೇ ಮಾರ್ಗವಾಗಿ ಪರೀಕ್ಷಾರ್ಥ ನಡೆಸಲಿದ್ದು, ಬಳಿಕ ಮಥುರ ಮತ್ತು ಪಲ್ವಾಲ್ ನ ರಾಜಧಾನಿ ಮಾರ್ಗದಲ್ಲಿ 40 ದಿನಗಳ ಕಾಲ ಓಡಾಡಲಿದೆ. ಪರೀಕ್ಷಾರ್ಥ ಯಶಸ್ವಿಯಾದ ನಂತರವಷ್ಟೇ ಟೈಮಿಂಗ್ ಟ್ರಯಲ್ ನಡೆಸಲಿದೆ.

ಸ್ಪೇನ್ ನ ಹೈ ಸ್ಪೀಡ್ ಮತ್ತು ಸೆಮಿ ಹೈ-ಸ್ಪೀಡ್ ರೈಲು ನಿರ್ಮಾಣ ಕಂಪನಿ ಟ್ಯಾಲ್ಗೋ ತನ್ನದೇ ವೆಚ್ಚದಲ್ಲಿ ಪ್ರಯೋಗ ನಡೆಸಲು ರೈಲು ಬೋಗಿಗಳನ್ನು ಒದಗಿಸಿದೆ. ಟಾಲ್ಗೋ ಲೈಟರ್ ರೈಲುಗಳು ಶೇ.30ರಷ್ಟು ಕಡಿಮೆ ಇಂಧನವನ್ನು ವ್ಯಯ ಮಾಡುತ್ತವೆ.

ಈ ಕುರಿತಂತೆ ಮಾತನಾಡಿರುವ ರೇಲ್ವೇ ಸಂಶೋಧನೆ ವಿನ್ಯಾಸಗಳ ಕಾರ್ಯನಿರ್ವಾಹಕ ಮತ್ತು ನಿರ್ದೇಶಕ ಹಮೀದ್ ಅಖ್ತರ್ ಅವರು, ಯಶಸ್ಸು ಅಥವಾ ವೈಫಲ್ಯಗಳ ಕುರಿತಂತೆ ಈಗಲೇ ಹೇಳುವುದು ಕಷ್ಟವಾಗುತ್ತದೆ. ಪರೀಕ್ಷಾರ್ಥ ಪ್ರಯಾಣದ ವೇಳೆ ಸಮಯವನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷೆ ನಂತರ ಎಲ್ಲಾ ಸಮಯವನ್ನು ನೋಡಿ ನಂತರ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ರೈಲಿನಲ್ಲಿ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ.

Comments are closed.