ಕರ್ನಾಟಕ

ಐಪಿಎಲ್ ಟೂರ್ನಿಯಲ್ಲಿ ಈ ವರೆಗೂ ಯಾವುದೇ ಆಟಗಾರ ಮಾಡಿದ ಸಾಧನೆಯನ್ನು ಮಾಡಿದ ವಿರಾಟ್ ಕೊಹ್ಲಿ !

Pinterest LinkedIn Tumblr

virat-kohli

ಬೆಂಗಳೂರು: ಸರಣಿ ಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಸಿಬಿ ತಂಡ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಈ ವರೆಗೂ ಯಾವುದೇ ಆಟಗಾರ ಮಾಡಿದ ಸಾಧನೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ.

ಸರಣಿ ಯುದ್ದಕ್ಕೂ ತಮ್ಮ ಅಮೋಘ ಬ್ಯಾಟಿಂಗ್ ನಿಂದಲೇ ಸುದ್ದಿಯಾಗುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಟೂರ್ನಿಗಳಲ್ಲೇ ಬ್ಯಾಟ್ಸಮನ್ ವೊಬ್ಬ ಗಳಿಸಿದ ಅತ್ಯಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳನ್ನಾಡಿದ್ದು, 81.08 ಸರಾಸರಿಯಲ್ಲಿ ಮತ್ತು 152.03ರ ಸ್ಟ್ರೈಕ್ ರೇಟ್ ನಲ್ಲಿ ಬರೊಬ್ಬರಿ 973 ರನ್ ಸಿಡಿಸಿದ್ದಾರೆ. ಇದು ಈ ಬಾರಿಯ ಐಪಿಎಲ್ ನಲ್ಲಿ ಆಟಗಾರನೊಬ್ಬ ಸಿಡಿಸಿದ ಅತ್ಯಧಿಕ ರನ್ ಗಳಿಕೆಯಾಗಿದೆ. ಇದೇ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಟ ಪ್ರಶಸ್ತಿಗೂ ಕೂಡ ಭಾಜನರಾದರು.

ಅಂತೆಯೇ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 4 ಸಾವಿರ ರನ್ ಗಳ ಗಡಿದಾಟಿದ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾದರೂ. ಈ ಹಿಂದೆ ಐಪಿಎಲ್ ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಹೊಂದಿದ್ದ ಕ್ರಿಸ್ ಗೇಯ್ಲ್, ಬ್ರೆಂಡನ್ ಮೆಕ್ಕಲಮ್, ಡೇವಿಡ್ ವಾರ್ನರ್ ಅವರ ದಾಖಲೆಗಳನ್ನು ವಿರಾಟ್ ಕೊಹ್ಲಿ ಈ ಸರಣಿಯ ಮೂಲಕ ಧೂಳಿಪಟ ಮಾಡಿದರು. ಒಟ್ಟು 139 ಐಪಿಎಲ್ ಪಂದ್ಯಗಳನ್ನಾಡಿರುವ ಕೊಹ್ಲಿ 38.05 ಸರಾಸರಿಯಲ್ಲಿ 4110 ರನ್ ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ನಾಲ್ಕು ಭರ್ಜರಿ ಶತಕಗಳು ಕೂಡ ಸೇರಿವೆ. ವಿಶೇಷವೆಂದರೆ ಕೊಹ್ಲಿ ಸಿಡಿಸಿದ ಈ ನಾಲ್ಕು ಶತಕಗಳು ಕೂಡ ಬಂದಿದ್ದೂ ಇದೇ 2016ಕರ ಟೂರ್ನಿಯಲ್ಲಿ.

ರೈನಾ ದಾಖಲೆ ಮುರಿದ ಕೊಹ್ಲಿ
ಇದೇ ವೇಳೆ ತಮ್ಮ ಆಕರ್ಷಕ ಅರ್ಧಶತಕದ ನೆರವಿನಿಂದ ಕೊಹ್ಲಿ ಗುಜರಾತ್ ಲಯನ್ಸ್ ತಂಡ ನಾಯಕ ಸುರೇಶ್ ರೈನಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರೈನಾ ಹೆಸರಲ್ಲಿದ್ದ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಇದೀಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸುರೇಶ್ ರೈನಾ ಈ ವರೆಗೂ ಒಟ್ಟು 147 ಪಂದ್ಯಗಳಲ್ಲಿ 4, 098 ರನ್ ಗಳಿಸಿದ್ದಾರೆ. ಆದರೆ ಕೊಹ್ಲಿ 4110 ರನ್ ಸಿಡಿಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ. ರೈನಾ ದಂಪತಿಗೆ ಮಗು ಜನಿಸಿದ ಹಿನ್ನಲೆಯಲ್ಲಿ ಸುರೇಶ್ ರೈನಾ ಒಂದೆರಡು ಪಂದ್ಯಗಳಿಗೆ ಗೈರಾಗಿದ್ದರು. ಇದು ಕೊಹ್ಲಿ ಅವರ ದಾಖಲೆಗೆ ನೆರವಾಯಿತು ಎಂದು ತಜ್ಞರು ಹೇಳಿದ್ದಾರೆ.

ಜಸ್ಟ್ ಮಿಸ್ ಆಯ್ತು “ಸರಣಿ ಶ್ರೇಷ್ಠ” ವಿರಾಟ್ ಕೊಹ್ಲಿ ವಿಶ್ವದಾಖಲೆ
ಟೂರ್ನಿಯುದ್ದಕ್ಕೂ ಆಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲಿ ತಮ್ಮ ಹೆಸರಿಗೆ ದಾಖಲಾಗಬಹುದಾಗಿದ್ದ ವಿಶ್ವದಾಖಲೆಯಿಂದ ವಂಚಿತರಾದರು. ಪ್ರಸಕ್ತ 2016ರ ಐಪಿಎಲ್ ಟೂರ್ನಿಯಲ್ಲಿ 973 ರನ್ ಗಳಿಸಿದ ಕೊಹ್ಲಿ ಕೇವಲ 27 ರನ್ ಗಳ ಅಂತರದಿಂದ ಸಾವಿರ ರನ್ ಗಳ ದಾಖಲೆಯಿಂದ ವಂಚಿತರಾದರು. ಒಂದು ವೇಳೆ ಕೊಹ್ಲಿ ಈ 27 ರನ್ ಗಳಿಸಿದ್ದರೆ, ಐಪಿಎಲ್ ಟೂರ್ನಿಯೊಂದರಲ್ಲಿ ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗುತ್ತಿದ್ದರು.

ಒಂದೇ ಟೂರ್ನಿಯಲ್ಲಿ ನಾಲ್ಕು ಶತಕ ಭಾರಿಸಿದ ಏಕೈಕ ಆಟಗಾರ
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ನಾಲ್ಕು ಶತಕಗಳೂ ಕೂಡ ದಾಖಲೆ ಪಟ್ಟಿ ಸೇರಿದ್ದು, ಒಂದೇ ಟೂರ್ನಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಕೊಹ್ಲಿ ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.

Comments are closed.