ಕರ್ನಾಟಕ

ಯುವತಿಯ ಮೇಲೆ ಅತ್ಯಾಚಾರ ಇಬ್ಬರ ಸೆರೆ

Pinterest LinkedIn Tumblr

rapesclrಬೆಂಗಳೂರು,ಮೇ.28-ಮಧ್ಯಪ್ರದೇಶ ಮೂಲದ ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಆರ್‍ಎಂಸಿ ಯಾರ್ಡ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೃತ್ಯ ನಡೆಸಿದ ಭದ್ರಪ್ಪ ಲೇಔಟ್‍ನ ಕೃಷ್ಣಮೂರ್ತಿ ಹಾಗೂ ಶಿವಕುಮಾರ್‍ನನ್ನು ಬಂಧಿಸಲಾಗಿದೆ,ಮಧ್ಯಪ್ರದೇಶ ಮೂಲದ 25ವರ್ಷದ ಯುವತಿಯನ್ನು 15 ದಿನಗಳ ಹಿಂದೆ ಕಾರಿನಲ್ಲಿ ನೆಲಗೆದರನಹಳ್ಳಿ ಬಳಿಗೆ ಕರೆದೊಯ್ದ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ವೆಸಗಿ 6ಸಾವಿರ ರೂಗಳನ್ನು ನೀಡಿದ್ದಾರೆ.

ಯುವತಿಯು ಜಗಳ ಮಾಡಿದಾಗ ಹಣವನ್ನು ಕಸಿದು ಆರೋಪಿಗಳು ಪರಾರಿಯಾಗಿದ್ದಾರೆ.

ಸಂತ್ರಸ್ಥ ಯುವತಿಯು ಆರ್‍ಎಂಸಿ ಯಾರ್ಡ್ ಪೊಲೀಸರಿಗೆ ದೂರು ನೀಡಿ ಹಣ ಕಸಿದು ಪರಾರಿಯಾಗಿರುವುದಾಗಿ ತಿಳಿಸಿದ್ದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಅತ್ಯಾಚಾರ ವೆಸಗಿರುವುದು ಪತ್ತೆಯಾಗಿದೆ.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸುರೇಶ್ ಅವರು ತಿಳಿಸಿದ್ದಾರೆ.

Comments are closed.