ಕರ್ನಾಟಕ

ದಲಿತರಲ್ಲಿ ಸೇಡಿಲ್ಲ – ಆಂಜನೇಯ

Pinterest LinkedIn Tumblr

h-anjaneyaCLR-418x400ಬೆಂಗಳೂರು, ಮೇ ೨೮- ದಲಿತ ಸಮುದಾಯದವರನ್ನು ಈಗಲೂ ಮೇಲ್ವರ್ಗದ ಕೆಲ ಮನಸ್ಸುಗಳು ಗೌರವದಿಂದ ಕಾಣುತ್ತಿಲ್ಲ. ಆದರೂ ದಲಿತ ವರ್ಗ ಈ ಅವಮಾನಗಳನ್ನು ಮೂಕರಂತೆ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಯಾವುದೇ ಸೇಡು ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿಂದು ಏರ್ಪಡಿಸಿದ್ದ ಪ್ರಜಾಪ್ರಭುತ್ವ ರಕ್ಷಣೆಗಾಗಿ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ದಲಿತ ಸಮುದಾಯಕ್ಕೆ ಶಕ್ತಿ ಬಂದಿದ್ದರೂ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶದಂತೆ ಬದುಕಿದ್ದಾರೆ ಎಂದರು.

ದೇವಸ್ಥಾನ ನಿರ್ಮಾಣ ಮಾಡಿದ ಹಿಂದುಳಿದ ವರ್ಗದವರಿಗೆ ದೇವರ ದರ್ಶನವೇ ಇಲ್ಲ. ಈಗಲೂ ಬಹುತೇಕ ಕಡೆ ದಲಿತರನ್ನು ದೇವಾಲಯದ ಒಳಗೆ ಬಿಡುವುದಿಲ್ಲ. ಇದಕ್ಕಾಗಿ ಯಾವುದೇ ಹೋರಾಟ ಬೇಡ. ಅವರ ದೇವರನ್ನು ಅವರೇ ಇಟ್ಟುಕೊಳ್ಳಲಿ. ದೇವರ ಹತ್ತಿರ ಹೋದರೆ ನೀರು ಸಿಗುವುದಿಲ್ಲ ಎಂದು ಸಚಿವರು ಹೇಳಿದರು.

ರಾಮಾಯಣ, ಮಹಾಭಾರತ, ಸಂವಿಧಾನ ಬರೆದವರು ಕೆಳ ವರ್ಗದವರೇ ಇಂದಿಗೂ ದಲಿತರು ಬಸವಣ್ಣನವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು.

ದಲಿತ ಸಮುದಾಯ ಎಲ್ಲಾ ವರ್ಗಗಳಲ್ಲಿ ತನ್ನದೇ ಕೊಡುಗೆ ನೀಡದೇ ಆದರೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ಕಾರದ ಸವಲತ್ತುಗಳನ್ನು ಪ್ರತಿ ದಲಿತ ಸಮುದಾಯಕ್ಕೆ ತಲುಪಬೇಕು. ಇದಕ್ಕಾಗಿ ಶಿಕ್ಷಣ ಪಡೆದವರು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಮಾರಂಭದಲ್ಲಿ ಸಾಹಿತಿ ಪ್ರೊ. ಜಿ.ಕೆ. ಗೋವಿಂದರಾವ್, ಪ್ರಗತಿ ಪರ ಚಿಂತಕ ಮಂಗಳೂರು ವಿಜಯ, ಇಂದಿರಾ ಕೃಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ್ ನಾಗವಾರ ಉಪಸ್ಥಿತರಿದ್ದರು.

Comments are closed.