ಅಂತರಾಷ್ಟ್ರೀಯ

ಬ್ರೆಜಿಲ್ನಲ್ಲಿ ಬಾಲಕಿ ಮೇಲೆ 30 ಕ್ಕೂ ಹೆಚ್ಚು ಮಂದಿಯಿಂದ ಸಾಮೂಹಿಕ ಅತ್ಯಾಚಾರ..!

Pinterest LinkedIn Tumblr

rapppಬ್ರೆಜಿಲ್ಮೇ-ಮೇ , 28: ಈ ವರ್ಷ ಒಲಿಂಪಿಕ್ಸ್ ನಡೆಯಲಿರುವ ರಯೋ ಡೀ ಜೆನೇರೋ ನಗರದಲ್ಲಿ 16 ವರ್ಷದ ಬಾಲಕಿ ಮೇಲೆ ಅಮಾನುಷ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರವಾದ ಹೇಯ ಘಟನೆ ವರದಿಯಾಗಿದೆ. ಬಾಲಕಿಯ ಮೇಲೆ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರ ಎಸಗಿರುವುದು ತಿಳಿದುಬಂದಿದೆ. ಬಾಲಕಿಯನ್ನು ರೇಪ್ ಮಾಡುತ್ತಿರುವ ವಿಡಿಯೋವೊಂದು ಟ್ವಿಟ್ಟರ್’ನಲ್ಲಿ ಶೇರ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹುಡುಗಿಯ ಮೇಲೆ ಅತ್ಯಾಚಾರ ಎಸಗಿದವರಲ್ಲಿ ಕೆಲ ಅಪ್ರಾಪ್ತ ಬಾಲಕರೂ ಸೇರಿದ್ದಾರೆನ್ನಲಾಗಿದೆ.

ಟ್ವಿಟ್ಟರ್’ನಲ್ಲಿ ಪೋಸ್ಟ್ ಆದ ವಿಡಿಯೋದಲ್ಲಿ ಬಾಲಕಿಗೆ ಲೈಂಗಿಕ ಹಿಂಸೆ ನೀಡುತ್ತಿರುವ ದೃಶ್ಯಗಳಿವೆ. ಅಲ್ಲದೇ, ಮೂವತ್ತಕ್ಕೂ ಹೆಚ್ಚು ಜನರು ಈ ಹುಡುಗಿಯನ್ನು ಸಂಭೋಗಿಸಿದ್ದಾರೆಂದು ವ್ಯಕ್ತಿಯೊಬ್ಬ ಹೇಳುತ್ತಿರುವ ದೃಶ್ಯವೂ ಇದೆ. ರಯೋ ಪಟ್ಟಣದ ಪಶ್ಚಿಭಾಗದಲ್ಲಿರುವ ಸ್ಲಮ್’ವೊಂದರಲ್ಲಿ ಮೇ 21ರಂದು ಅತ್ಯಾಚಾರ ಘಟಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ವಿಡಿಯೋದಲ್ಲಿರುವ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆನ್ನಲಾಗಿದೆ.

ಸ್ಲಮ್ ಬಳಿ ಇದ್ದ ತನ್ನ ಬಾಯ್’ಫ್ರೆಂಡ್’ನನ್ನು ನೋಡಲು ಹುಡುಗಿ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಮೇ 21, ಶನಿವಾರದಂದು ಅತ್ಯಾಚಾರಕ್ಕೊಳಗಾದ ಹುಡುಗಿ ಮರುದಿನ ಬೆಳಗ್ಗೆಯವರೆಗೂ ಪ್ರಜ್ಞೆಯಲ್ಲೇ ಇರಲಿಲ್ಲ. ಬೆಳಗ್ಗೆ ಎದ್ದಾಗ ಆಕೆಯ ದೇಹ ಬೆತ್ತಲಾಗಿತ್ತು, ಗಾಯಗಳಾಗಿದ್ದವು. ತಾನು ಹೇಗೋ ಸಂಭಾಳಿಸಿಕೊಂಡು ಮನೆಗೆ ಹೋದೆ. ಆದರೆ, ಕೆಲ ದಿನಗಳ ನಂತರ ತನ್ನನ್ನು ರೇಪ್ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋವನ್ನು ನೋಡಿ ಆಘಾತವಾಯಿತು ಎಂದು ಆ ಹುಡುಗಿ ಹೇಳಿಕೊಂಡಿದ್ದಾಳೆ.

ಬ್ರೆಜಿಲ್’ನ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ದೊಡ್ಡ ಕೋಲಾಹಲ ಮೂಡಿಸಿದೆ. ಅತ್ಯಾಚಾರಕ್ಕೊಳಗಾದವಳ ತಪ್ಪೇನಿಲ್ಲ ಎಂಬಂತಹ ಹ್ಯಾಶ್’ಟ್ಯಾಗ್’ಗಳ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ, ಬ್ರೆಜಿಲ್’ನ ಹಂಗಾಮಿ ಅಧ್ಯಕ್ಷ ಮಿಚೆಲ್ ಟೆಮೆರ್ ಅವರು ಘಟನೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ. 21ನೇ ಶತಮಾನದಲ್ಲಿಯೂ ಇಂತಹ ಅಮಾನುಷ ಅಪರಾಧಗಳನ್ನು ನೋಡಬೇಕಾಗಿದೆಯಲ್ಲಾ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.

Comments are closed.