ಕರ್ನಾಟಕ

“ರಿಯೋ ಒಲಂಪಿಕ್ಸ್’ಗೆ ಯಾರು ಬೆಸ್ಟ್ : ಹೈಕೋರ್ಟ್ ತೀರ್ಮಾನ ಮೇ.30ಕ್ಕೆ ಪ್ರಕಟ

Pinterest LinkedIn Tumblr

ನವದೆಹಲಿ, ಮೇ.28 : ಭಾರೀ ಕುತೂಹಲ ಕೆರಳಿಸಿರುವ ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್ ಇಬ್ಬರ ನಡುವೆ ರಿಯೋ ಒಲಂಪಿಕ್ಸ್’ಗೆ ಯಾರು ಬೆಸ್ಟ್ ಎಂಬ ವಿಚಾರದ ಬಗ್ಗೆ ಹೈಕೋರ್ಟ್ ಇನ್ನೂ ಅಂತಿಮ ತೀರ್ಮಾನ ಪ್ರಕಟಿಸಿಲ್ಲ. ಬದಲಾಗಿ ವಿಚಾರಣೆಯನ್ನು ಮೇ.30ಕ್ಕೆ ಮುಂದೂಡಿದೆ.

ಈಗಾಗಲೇ ನರಸಿಂಗ್ ಯಾದವ್ 74 ಕೆ.ಜಿ ವಿಭಾಗದಲ್ಲಿ ಒಲಂಪಿಕ್ಸ್’ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇದೇ ವಿಭಾಗದಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಎರಡು ಬಾರಿ ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಆಯ್ಕೆ ಟ್ರಯಲ್ಸ್ ನಡೆಸಬೇಕು ಎಂದು ಪಟ್ಟು ಹಿಡಿದ್ದಾರೆ.

ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಉಭಯ ಆಟಗಾರರ ಪರ ವಕೀಲರು ವಾದ ಮಂಡಿಸಲು ಇಂದು ಅವಕಾಶ ನೀಡಿದೆ. ಸೋಮವಾರ ಸುಶೀಲ್ ಹಾಗೂ ನರಸಿಂಗ್ ಇಬ್ಬರಲ್ಲಿ ಯಾರನ್ನು ಒಲಂಪಿಕ್ಸ್’ಗೆ ಕಳಿಸಬೇಕು ಎನ್ನುವ ತೀರ್ಮಾನವನ್ನು ಉಚ್ಚನ್ಯಾಯಾಲಯವು ಮೇ.30ರಂದು ಪ್ರಕಟಿಸಲಿದೆ.

ಸುಶೀಲ್ ಪರ ವಕೀಲರು ಭಾರತ ತಂಡದ ಕೋಚ್ ಜಾರ್ಜಿಯನ್ ಅಕ್ಟೋಬರ್’ನಲ್ಲಿ ಸುಶೀಲ್ ತರಬೇತಿ ಪಡೆದಿರುವ ಬಗ್ಗೆ ನೀಡಿರುವ ಪ್ರಮಾಣ ಪತ್ರವನ್ನು ಕೋರ್ಟ್’ಗೆ ಹಸ್ತಾಂತರ ಮಾಡಿದ್ದಾರೆ.
ಭಾರತದ ಕುಸ್ತಿ ಒಕ್ಕೂಟವು ನರಸಿಂಗ್ ಯಾದವ್ ಪರ ಒಲವು ಹೊಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಸೋಮವಾರ ಈ ಎಲ್ಲ ಗೊಂದಲಗಳಿಗೆ ತೆರೆಬೀಳುವ ಸಾಧ್ಯತೆಯಿದೆ.

Comments are closed.