ಕರ್ನಾಟಕ

ಬೆಂಗಳೂರಲ್ಲಿ ನಡೆಯಿತೊಂದು ಪೈಶ್ಚಾಚಿಕ ಕೃತ್ಯ; ಸ್ನೇಹಿತರೆ ಸೇರಿ ಯುವತಿ ಮೇಲೆ ಗ್ಯಾಂಗ್‍ರೇಪ್ ಮಾಡಿದರು

Pinterest LinkedIn Tumblr

gang rape

ಬೆಂಗಳೂರು: ಐದು ಮಂದಿ ಸ್ನೇಹಿತರಿಂದಲೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ನಗರದ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

26 ವರ್ಷದ ಯುವತಿಯ ಮೇಲೆ ಆಕೆಯ ಸ್ನೇಹಿತರೆ ಸಾಮೂಹಿಕ ಅತ್ಯಚಾರ ನಡೆಸಿದ್ದು, ಮಧ್ಯಪ್ರದೇಶ ಮೂಲದ ಆಕೆಯನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗುವುದಾಗಿ ಹೇಳಿ ಅತ್ಯಾಚಾರ ನಡೆಸಿದ್ದಾರೆ.

ಎಂಎಸ್ ರಾಮಯ್ಯ ಆಸ್ಪತ್ರೆ ಬಳಿಯಿರುವ ಕಾಫಿ ಶಾಪ್‍ನಿಂದ ಯುವತಿಯನ್ನು ಕರೆದುಕೊಂಡು ಹೋದ ಆಕೆಯ ಸ್ನೇಹಿತರು, ಯಶವಂತಪುರ ಮಾರ್ಗವಾಗಿ ಆರ್‍ಎಂಸಿ ಯಾರ್ಡ್‍ನ ಬಳಿಯಿರುವ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಯುವತಿಗೆ ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಗೆ 6 ಸಾವಿರ ರೂ. ನೀಡಿ ಯಾರಿಗೂ ಹೇಳದಂತೆ ಹೆದರಿಸಿದ್ದಾರೆ.

ಇದಾದ ನಂತರ ಯುವತಿ ಆರ್‍ಸಿಎಂ ಯಾರ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳಾದ ಕೃಷ್ಣಮೂರ್ತಿ ಹಾಗೂ ಶಿವಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ.

Comments are closed.