ಕರ್ನಾಟಕ

ಮಲೈಕಾ ಅರೋರಾ ರ ಸೌಂದರ್ಯ ರಹಸ್ಯ ಟಾಯ್ಲೆಟ್ ಪೇಪರ್… !

Pinterest LinkedIn Tumblr

malika_khan_arora

ಮುಂಬಯಿ.ಮೇ.27: ಬಾಲಿವುಡ್ ನಟಿ ಮಲೈಕಾ ಅರೋರಾಳ ಸೌಂದರ್ಯ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಹಲವಾರು ಮಹಿಳೆಯರು ಆಕೆಯಂತೆಯೇ ಸುಂದರವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಆದರೆ ಆಕೆಯ ಸೌಂದರ್ಯದ ಗುಟ್ಟು ತಿಳಿಯದೆ ಸುಮ್ಮನಾಗಿದ್ದಾರೆ. ಇತ್ತೀಚೆಗೆ ನಡೆದಿದ್ದ ರಿಯಾಲಿಟಿ ಶೋವೊಂದರಲ್ಲಿ ನಿರ್ಣಾಯಕಿಯಾಗಿ ಭಾಗವಹಿಸಿದ್ದ ಮಲೈಕಾ ತನ್ನ ಸೌಂದರ್ಯದ ರಹಸ್ಯವನ್ನು ಬಹಿರಂಗಗೊಳಿಸಿದ್ದಾಳೆ.

ಈಕೆ ತನ್ನ ಸೌಂದರ್ಯಕ್ಕೆ ‘ಟಾಯ್ಲೆಟ್ ಪೇಪರ್’ ಕಾರಣ ಎಂದಿದ್ದಾಳೆ. ಅಬ್ಬಾ…! ಅಂತ ಬೆಚ್ಚಿ ಬೀಳುವ ಮೊದಲು ಮಲೈಕಾ ಈ ರೀತಿ ಹೇಳಲು ಕಾರಣವೇನು ಎಂದು ತಿಳಿದುಕೊಳ್ಳುವುದು ಅಗತ್ಯ. ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಎಂಬ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಆಗಮಿಸಿದ್ದ ವ್ಯಕ್ತಿಯೊಬ್ಬ ಟಾಯ್ಲೆಟ್ ಪೇಪರ್’ನ್ನು ತಿಂದಿದ್ದ. ಈ ವೇಳೆ ತಮಾಷೆಗೆಂದು ಪಕ್ಕದಲ್ಲೇ ಇದ್ದ ಕರಣ್ ಜೋಹರ್ ಮಲೈಕಾಳಿಗೂ ಟಾಯ್ಲೆಟ್ ಪೇಪರ್ ತಿನ್ನುವ ಅಭ್ಯಾಸವಿದೆ,ಇದೇ ಆಕೆಯ ಸೌಂದರ್ಯದ ಹಿಂದಿನ ಗುಟ್ಟು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಲೈಕಾ ‘ಹೌದು, ನನ್ನಂತೆ ಸುಂದರವಾಗಿ ಕಾಣಲು ಟಾಯ್ಲೆಟ್ ಪೇಪರ್ ತಿನ್ನಿ’ ಎಂದು ಕರಣ್ ಮಾತಿಗೆ ತಿರುಗೇಟು ನೀಡಿದ್ದಾರೆ.

Comments are closed.