ಕರಾವಳಿ

ಉಡುಪಿ: ಮರಳು ಮಾಫಿಯಾದೊಂದಿಗೆ ಜಿಲ್ಲಾಧಿಕಾರಿ ಶಾಮೀಲು ಅರೋಪ: ಡಿ.ಸಿ. ವರ್ಗಾವಣೆಗೆ ದ.ಸಂ.ಸ. ಪ್ರತಿಭಟನೆ

Pinterest LinkedIn Tumblr

ಉಡುಪಿ: ಜಿಲ್ಲಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆ ಒಂದು ಮಾಫಿಯವಾಗಿದ್ದು ಈ ದಂಧೆಕೋರರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಶಾಮೀಲಾಗಿದ್ದಾರೆ. ಇಂತಹ ಜಿಲ್ಲಾಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಉಡುಪಿ ಜಿಲ್ಲೆ ಇವರ ವತಿಯಿಂದ ಉಡುಪಿ ಕ್ಲಾಕ್ ಟವರ್ ಸಮೀಪ ಶುಕ್ರವಾರ ಬ್ರಹತ್ ಪ್ರತಿಭಟನೆ ನಡೆಯಿತು.

ಉಡುಪಿಯ ಜೋಡುಕಟ್ಟೆಯಿಂದ ಕ್ಲಾಕ್ ಟವರ್ ತನಕ ಬ್ರಹತ್ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಉಡುಪಿ ಡಿಸಿ ಅವರ ಪ್ರತಿಕ್ರತಿ ಧಹಿಸಿ ಆಕ್ರೋಷ ವ್ಯಕ್ತಪಡಿಸಿದರು.

Udupi_DC Against_DSS Protest (4) Udupi_DC Against_DSS Protest (1) Udupi_DC Against_DSS Protest (2) Udupi_DC Against_DSS Protest (3) Udupi_DC Against_DSS Protest (5) Udupi_DC Against_DSS Protest (6) Udupi_DC Against_DSS Protest (8) Udupi_DC Against_DSS Protest (7)

ಮರಳುಗಾರಿಕೆಗೆ ಪರವಾನಿಗೆ ನೀಡುವ ವಿಚಾರದಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಸಿ.ಆರ್.ಝಡ್. ವ್ಯಾಪ್ತಿಯ ಮರಳುಗಾರಿಕೆ ಪರವಾನಿಗೆ ನೀಡುವ ಸಂದರ್ಭ ಇದನ್ನು ಖಾಸಗಿ ಸಂಸ್ಥೆ ನಿರ್ವಹಣೆಗೆ ಆದೇಶ ನೀಡಿ ಕಾನೂನು ಉಲ್ಲಂಘಿಸುವ ಮೂಲಕ ಮರಳುಗಾರಿಕೆಯನ್ನು ಖಾಸಗೀಕರಣ ಮಾಡಲಾಗಿದೆ. ಅಲ್ಲದೇ ಈ ಬಗ್ಗೆ ಮಾತನಾಡಲು ಹೊರಟ ದಲಿತರನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ. ಉಡುಪಿ ಜಿಲ್ಲಾಧಿಕಾರಿಗಳು ದಲಿತ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ದ.ಸಂ.ಸ. ಮುಖಂಡ ಉದಯಕುಮಾರ್ ತಲ್ಲೂರು ಆರೋಪಿಸಿದರು.

ಮರಳುಗಾರಿಕೆಯ ಪರವಾನಿಗೆ ವಿಚಾರದಲ್ಲಿ ನಡೆದ ಹಗರಣದ ಬಗ್ಗೆ ಸಿ.ಬಿ.ಐ. ತನಿಖೆಯಾಗಬೇಕು. ಒಂದೇ ಕುಟುಂಬದ ಇಬ್ಬರಿಗೆ ಮರಳುಗಾರಿಕ್ಜೆ ಪರವಾನಿಗೆ ನೀಡಿರುವುದು ತಪ್ಪು. ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವ ಕಾರ್ಮಿಕರ ಕಡೆಗಣನೆ ಸರಿಯಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿ ಮುಖಂಡರಾದ ವಿಶ್ವನಾಥ, ಶೇಖರ್ ಹೆಜಮಾಡಿ, ಕೇಶವ್, ಚಂದ್ರ ಅಲ್ತಾರ್, ರಮೇಶ್, ತೊಟ್ಟಂ ಪ್ರಕಾಶ್, ಚಂದ್ರಮ ತಲ್ಲೂರು,ವಿಜಯ್ ಮೊದಲಾದವರಿದ್ದರು.

Comments are closed.