ಕರ್ನಾಟಕ

ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ವಿಶಿಷ್ಟ ಕಥೆಯ ‘ಅಪೂರ್ವ’ ಈ ವಾರ ರಾಜದ್ಯಂತ ಬಿಡುಗಡೆ

Pinterest LinkedIn Tumblr

apoorva

ಸಿನಿಮಾವನ್ನೇ ತನ್ನ ಉಸಿರಾಗಿ ಮಾಡಿಕೊಂಡು ಬಂದಿರುವ 55 ವರ್ಷದ ನಟ ರವಿಚಂದ್ರನ್, ನಟನೆಯ ವಿಷಯಕ್ಕೆ ಬಂದಾಗ ಚಿರಯುವಕನೇ ಆಗಿರುತ್ತಾರೆ. ಬಹಳ ದಿನಗಳ ನಂತರ ಅವರ ಹೋಮ್ ಬ್ಯಾನರ್‌ನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ ‘ಅಪೂರ್ವ’ ಈವಾರ ರಾಜದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವೆ ನಡೆಯುವ ಕಥೆಯುಳ್ಳ ಈ ಸಿನಿಮಾವನ್ನು ಸಂಪೂರ್ಣಗೊಳಿಸಲು ಕನಸುಗಾರನಿಗೆ ಸುಮಾರು 30 ತಿಂಗಳು ಬೇಕಾಯಿತಂತೆ. ಕನಸುಗಾರನ ಚಿತ್ರವನ್ನು ನೋಡಲಿ ಅವರ ಅಭಿಮಾನಿಗಳೂ ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಇನ್ನೇನು ಆದಿನ ಬಂದೇಬಿಟ್ಟಿದೆ.

ಮೊನ್ನೆ ತನ್ನ ಬಹುದಿನಗಳ ಕನಸಾದ ಅಪೂರ್ವ ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಮಾಧ್ಯಮ ಮಿತ್ರರನ್ನೆಲ್ಲಾ ತಮ್ಮ ಮನೆಗೆ ಕರೆಸಿಕೊಂಡು ಚಿತ್ರದ ಬಗ್ಗೆ ಒಂದಷ್ಟು ವಿವರಗಳನ್ನು ಹಂಚಿಕೊಂಡರು. ಅವರ ಜೊತೆ ನಾಯಕಿಯಾದ ಅಪೂರ್ವ ಕೂಡ ಇದ್ದರು. ದೀರ್ಘಕಾಲದ ನಂತರ ತನಗೆ ಸಂಪೂರ್ಣ ಸಂತಸ ನೀಡಿದ ಚಿತ್ರ ಅಪೂರ್ವ ಎನ್ನುವ ನಟ-ನಿರ್ದೇಶಕ ರವಿಚಂದ್ರನ್ ಇದು ಒಂದು ಅನುಭವದ ಮತ್ತು ಒಂದು ಮುಗ್ಧತೆಯ ನಡುವೆ ನಡೆಯುವ ಕಥೆ. ನಮ್ಮ ಸದ್ಯದ ಪರಿಸ್ಥಿತಿಯ ಪ್ರಕಾರ ನಾವು ಮುಂದಿನ ಹೆಜ್ಜೆಗಳನ್ನು ಇಡುತ್ತೇವೆ.

ಹಾಗೆಯೇ ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮಕಥೆಯಲ್ಲಿ ಇಂಥ ಸಾಕಷ್ಟು ಸನ್ನಿವೇಶಗಳನ್ನು ಹೆಣೆಯಲಾಗಿದೆ. ಇಲ್ಲಿ ಪುರುಷ ಜೀವನವನ್ನು ಸಾಕಷ್ಟು ಕಂಡಿzನೆ, ಯುವತಿ ಈಗಷ್ಟೇ ಹೊರಜಗತ್ತಿಗೆ ಕಾಲಿಡುತ್ತಿದ್ದಾ ಳೆ. ಮತ್ತು ಇವರಿಬ್ಬರ ನಡುವಿನ ಹೊಸ ಸಂಬಂಧವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇವರಿಬ್ಬರೂ ಒಟ್ಟಿಗೆ ಹೊರಜಗತ್ತಿಗೆ ಬಂದಾಗ, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಎಂಬುದು ಅಪೂರ್ವ ಸಿನಿಮಾದ ಪ್ರಮುಖ ಘಟ್ಟ. ಜೀವನ, ಪ್ರೀತಿ ಮತ್ತು ಪಯಣದ ಬಗ್ಗೆ ಇದು ನನಗೆ ಹೆಚ್ಚು ಹತ್ತಿರವಾದ ತಾತ್ವಿಕ ಚಿತ್ರ. ಅದೇ ರೀತಿಯಲ್ಲಿ ನಿರೂಪಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ ಕ್ರೇಜಿಸ್ಟಾರ್ ರವಿಚಂದ್ರನ್.

ಇದು ಕೇವಲ ನಾಯಕ ನಾಯಕಿಯ ಚಿತ್ರ ಅಲ್ಲ ಎನ್ನುವ ಅವರು ಕೆಲಸೀನ್‌ಗಳಲ್ಲಿ ಸುದೀಪ್ ಮತ್ತು ರವಿಶಂಕರ್ ಪಾತ್ರಗಳಾಗಿ ಬರುತ್ತಾರೆ ಮುಂದೆ ಅವರ ಕಂಠ ಉಳಿದುಕೊಳ್ಳುತ್ತದೆ. ಪ್ರಕಾಶ್‌ರಾಜ್, ತಾರಾ, ರಂಗಾಯಣ ರಘು. ಸಾಧು ಕೋಕಿಲಾ ಅವರ ಕಂಠ ಮೂಡಿಬರುತ್ತದೆ. ಪತ್ರ ಲೋಕೇಶ್ ಮತ್ತು ವಿಜಯ ರಾಘವೇಂದ್ರ ಅತಿಥಿ ನಟರಾಗಿ ಕಾಣಿಸಿಕೊಂಡಿzರೆ ಎಂದು ಚಿತ್ರದ ಬಗ್ಗೆ ವಿವರಿಸುತ್ತಾರೆ. ಇದು ಹೊಸ ಪ್ರಾಕಾರದ ಸಿನೆಮಾ ಎನ್ನುವ ರವಿಚಂದ್ರನ್ ನಾನು ಮಾಡಿರುವ ಈ ಸಿನೆಮಾ ದೊಡ್ಡ ರಿಸ್ಕ್ ಎಂದು ಕೆಲವರು ಹೇಳಿzರೆ. ಆದರೆ ನನಗೆ ರಿಸ್ಕ್ ತೆಗೆದುಕೊಳ್ಳುವುದೇ ಇಷ್ಟ. ಈ ಚಿತ್ರದ ಒಂದು ಹಾಡು ಬಿಟ್ಟರೆ ಇನ್ನುಳಿದವೆಲ್ಲ ಸಂದರ್ಭೋಚಿತವಾಗಿವೆ ಎಂದು ಹೇಳುತ್ತಾರೆ.

ಈ ಚಿತ್ರದಲ್ಲಿ ಚಿಕ್ಕಮಗಳೂರು ಚೆಲುವೆ ಅಪೂರ್ವ ರವಿಚಂದ್ರನ್ ಎದುರು ನಾಯಕಿಯಾಗಿ ನಟಿಸಿzರೆ. ಅಪೂರ್ವ ಮೈಸೂರಿನಲ್ಲಿ ಬಿಕಾಂ ಓದುತ್ತಿದ್ದಾರೆ. ಒಮ್ಮೆ ಹೇಗೋ ರವಿಚಂದ್ರನ್ ಅವರ ಮೇಲ್ ಐಡಿ ತೆಗೆದುಕೊಂಡು ತನ್ನ ಫೋಟೋಗಳನ್ನು ಮೇಲ್ ಮಾಡಿದ್ದಾರೆ. ಆರಂಭದಲ್ಲಿ ರಿಜೆಕ್ಟ್ ಆಗಿ ನಂತರ ಈ ಚಿತ್ರದ ಪಾತ್ರಕ್ಕೆ ಸೆಲೆಕ್ಟ್ ಆಗಿರುವ ಅದೃಷ್ಟವಂತೆ ಈಕೆ. ಈ ಚಿತ್ರಕ್ಕಾಗಿ ರವಿಚಂದ್ರನ್ ಕುಟುಂಬ ಹಾಗೂ ಸ್ನೇಹಿತರು ತುಂಬು ಸಹಕಾರ ನೀಡಿದ್ದಾರೆ. ಖಂಡಿತಾ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯಲಿದೆ ಎಂದು ವಿಶ್ವಾಸವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.

Comments are closed.