ಕರ್ನಾಟಕ

ಚಿತ್ರೀಕರಣ ಪೂರ್ಣಗೊಳಿಸಿದ ತುಂಡ್ ಹೈಕ್ಳ ಸವಾಸ ಕಾಮಿಡಿ ಚಿತ್ರ

Pinterest LinkedIn Tumblr

vaishali

ತುಂಡ್ ಹೈಕ್ಳ ಸವಾಸ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದೆ. ಶ್ಯಾಮ್ ಜಿಗಳಿ,ರುದ್ರೇಶ್ ಮತ್ತು ಶಂಕರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಿಶೋರ್,ವೈಶಾಲಿ ದೀಪಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಟ ಪ್ರೇಮ್ ಮತ್ತು ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿರುವ ಮತ್ತೊಬ್ಬ ಯುವ ನಟ ವಿನಯ್ ರಾಜ್‌ಕುಮಾರ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ನಿರ್ಮಾಪಕರಲ್ಲಿ ಒಬ್ಬರಾದ ರುದ್ರೇಶ್,ಚಿತ್ರವನ್ನು ಸೆನ್ಸಾರ್‌ಗೆ ಕಳುಹಿಸಲಾಗಿದೆ.ಸದ್ಯದಲ್ಲಿಯೇ ಸೆನ್ಸಾರ್‌ನಿಂದ ಪ್ರಮಾಣ ಪತ್ರ ಬರುವ ಎಲ್ಲಾ ಸಾಧ್ಯತೆಗಳಿವೆ.ಚಿತ್ರದುರ್ಗ,ಭಟ್ಕಳ, ಮುರುಡೇಶ್ವರ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ.

ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರವನ್ನು ಕುಟುಂಬ ಸಮೇತ ನೋಡಬಹುದಾಗಿದೆ.ಇದೊಂದು ಕಾಮಿಡಿ ಚಿತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಮೇಲಾಗಿ ಸ್ನೇಹಿತರಾಗಿದ್ದರಿಂದ ಚಿತ್ರ ನಿರ್ಮಾಣ ಮಾಡಲು ಮೂರು ಮಂದಿ ಸ್ನೇಹಿತರು ಮುಂದಾದೆವು.

ಎಲ್ಲಾ ಅಂದು ಕೊಂಡಂತೆ ಆದರೆ ಚಿತ್ರವನ್ನು ಮುಂದಿನ ತಿಂಗಳ ಕೊನೆಯ ವಾರ ಇಲ್ಲವೇ ಜುಲೈನಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.ಚಿತ್ರವನ್ನು ಸ್ನೇಹಿತರ ಬಳಗಕ್ಕೆ ತೋರಿಸಿದೆವು.ಅವರು ನೋಡಿ ಖುಷಿ ಪಟ್ಟಿದ್ದಾರೆ.ಹೀಗಾಗಿ ಒಳ್ಳೆಯ ಚಿತ್ರವಾಗುವ ಭರವಸೆ ಇದೆ.

ಇನ್ನೂ ಪ್ರೇಕ್ಷಕರಿಗೆ ಚಿತ್ರ ಇಡಿಸಿದರೆ ನಾವು ಮಾಡಿದ ಪ್ರಯತ್ನಕ್ಕೆ ಫಲ ಸಿಗಲಿದೆ. ಚಿತ್ರದಲ್ಲಿ ಶಕೀಲ, ಅಭಿನಯಶ್ರೀ ಮತ್ತಿತರಿದ್ದಾರೆ ಎಂದು ಹೇಳಿಕೊಂಡರು.

ಹಾಯ್ ಚಿತ್ರವನ್ನು ತಾವು ನಿರ್ದೇಶನ ಮಾಡಿದ್ದು ಅದರ ಧ್ವನಿ ಸುರುಳಿ ಬಿಡುಗಡೆಯನ್ನು ಮುಂದಿನ ತಿಂಗಳು ಇಟ್ಟುಕೊಳ್ಳಲಾಗಿದೆ ಎಂದು ವಿವರ ನೀಡಿದರು ರುದ್ರೇಶ್.
ನಟ ಕಿಶೋರ್ ಸರಳವಾಗಿ ಇರಲು ಇಷ್ಟಪಡುತ್ತಾರೆ.

ಹೆಚ್ಚು ಸರಳ ಒಳ್ಳೆಯದಲ್ಲ ಚಿತ್ರರಂಗದಲ್ಲಿ ತುಳಿದು ಬಿಡುತ್ತಾರೆ ಎಚ್ಚರಿಕೆಯಿಂದ ಇರಿ ಎನ್ನುವ ಕಿವಿ ಮಾತು ಹೇಳಿದ ಲಹರಿ ಕಂಪನಿಯ ಲಹರಿ ವೇಲು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಎಲ್ಲರಿಗೂ ಇಡಿಸಲಿದೆ ಎಂದರು.

ನಾಯಕ ಕಿಶೋರ್ ಚಿತ್ರ ಚೆನ್ನಾಗಿ ಬಂದಿದೆ.ಎಲ್ಲ ಕಲಾವಿದರು ತಮ್ಮ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ.ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರೆ ನಟಿ ವೈಶಾಲಿ ದೀಪಕ್,ಹೊಸತನದ ಪಾತ್ರ ಸಿಕ್ಕಿದೆ ಚಿತ್ರದ ಮೂಲಕ ನನ್ನನ್ನು ಗುರುತಿಸಿಕೊಳ್ಳುವ ವಿಶ್ವಾಸವಿದೆ ಒಳ್ಳೆಯ ಪಾತ್ರ ನೀಡಿದ ಚಿತ್ರತಂಡಕ್ಕೆ ಅಭಿನಂಧನೆ ಸಲ್ಲಿಸುವುದಾಗಿ ಹೇಳಿಕೊಂಡರು.

ಗೀತ ರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಬರೆದಿದ್ದೇನೆ.ಎಲ್ಲಾ ಹಾಡುಗಳೂ ಚೆನ್ನಾಗಿ ಮೂಡಿ ಬಂದಿವೆ ಎಂದು ಹೇಳಿಕೊಂಡರು.

Comments are closed.