ಕರಾವಳಿ

ಮೋದಿ ಅಭಿಮಾನಿಯಿಂದ 5 ಕಿ.ಮೀ. ರಿಕ್ಷಾ ಪ್ರಯಾಣಕ್ಕೆ 1 ರೂಪಾಯಿ ಚಾರ್ಜ್

Pinterest LinkedIn Tumblr

ಕುಂದಾಪುರ: ಇಲ್ಲಿನ ವಿನಾಯಕ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರಾಗಿರುವ ಅಂಕದಕಟ್ಟೆ ಬಡಾಕೆರೆಯ ನಿವಾಸಿ ಸತೀಶ್ ಪ್ರಭು ಪ್ರಧಾನಿ ಮೋದಿ ಅಭಿಮಾನಿ.

Modhi Fan_Auto_Coast ! rupee (1) Modhi Fan_Auto_Coast ! rupee (2)

ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಭ್ರಮದಲ್ಲಿ ಐದು ಕಿ.ಮೀ. ಪ್ರಯಾಣಕ್ಕೆ ಕೇವಲ ಒಂದು ರೂಪಾಯಿ ತೆಗೆದುಕೊಂಡು ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಮೋದಿ ಬಗೆಗಿನ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಈ ಬಾರಿ ಸುಮಾರು ಮೂರು ದಿನಗಳ ಕಾಲ ಒಂದು ರೂಪಾಯಿಗೆ 5 ಕಿ.ಮೀ. ರಿಕ್ಷಾ ಪ್ರಯಾಣದ ಸೇವೆಯ ಕೊಡುಗೆಯನ್ನು ನೀಡುತ್ತಾರೆ.

ಕಳೆದ ವರ್ಷವೂ ಕೂಡ ಈ ಕೊಡುಗೆ ನೀಡಿ ಎಲ್ಲೆಡೆ ಪ್ರಚಾರ ಗಿಟ್ಟಿಸಿದ್ದರು.

Comments are closed.