ರಾಷ್ಟ್ರೀಯ

ಬಿಹಾರ ಮಾಜಿ ಮುಖ್ಯಮಂತ್ರಿ ಮಾಂಝಿ ಕಾರಿಗೆ ಕಲ್ಲು : ಗುಂಪು ಚೆದುರಿಸಲು ಗಾಳಿಯಲ್ಲಿ ಗುಂಡು

Pinterest LinkedIn Tumblr

manjiಪಾಟ್ನಾ, ಮೇ 26- ಮಾವೋವಾದಿ ಉಗ್ರರಿಂದ ನಿನ್ನೆ ಹತ್ಯೆಗೀಡಾದ ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ನಾಯಕನ ನಿವಾಸಕ್ಕೆ ತೆರಳುತ್ತಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್‌ರಾಮ್ ಮಾಂಝಿ ಅವರ ಬೆಂಗಾವಲು ಪಡೆ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಇಂದು ಬೆಳಗ್ಗೆ ಗಯಾದಲ್ಲಿ ನಡೆದಿದೆ. ಪ್ರತಿಭಟನಾಕಾರರು ಹಾಗೂ ಬೆಂಗಾವಲು ಪಡೆಯ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಉದ್ರಿಕ್ತರನ್ನು ಚೆದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ.

ಮಾಂಝಿ ಇದ್ದ ಕಾರನ್ನೂ ಪ್ರತಿಭಟನಾಕಾರರು ಸುತ್ತುವರಿದರು. ಆದರೆ, ಪೊಲೀಸರ ಸಹಾಯದಿಂದ ಮಾಜಿ ಮುಖ್ಯಮಂತ್ರಿ ಅಲ್ಲಿಂದ ತಪ್ಪಿಸಿಕೊಂಡು ಹೊರಟು ಹೋದರು. ಆದರೆ, ಉದ್ರಿಕ್ತರು ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಗಾಳಿಯಲ್ಲಿ ಗುಂಡು ಹಾರಿಸಿ, ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಗುಂಪು ಚೆದುರಿಸಿದರು. ಈ ಮಧ್ಯೆಯೇ ಮಾಂಝಿ ಅವರ ಬೆಂಗಾವಲು ವಾಹನಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಸುಟ್ಟು ಹಾಕಿದರು. ಜೆಡಿಯು ನಾಯಕ ಮಾಂಝಿ 9 ತಿಂಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದರು.

Comments are closed.