ಕರ್ನಾಟಕ

ಚತುರ ಸಾರಿಗೆ ವ್ಯವಸ್ಥೆಗೆ ಸಿದ್ದು ಚಾಲನೆ

Pinterest LinkedIn Tumblr

ರ಻ಮ಻

ಬೆಂಗಳೂರು, ಮೇ ೨೫- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚತುರ ಸಾರಿಗೆ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆ ಮಾಡಿದರು. ನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಂದು ಚತುರ ಸಾರಿಗೆ ಸಂಸ್ಥೆಯ ಕಂಟ್ರೋಲ್ ರೂಂ ಅನ್ನು ಉದ್ಘಾಟಿಸುವ ಮೂಲಕ ಈ ನೂತನ ಸಾರಿಗೆ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಬಿಎಂಟಿಸಿಯ ಈ ಚತುರ ಸಾರಿಗೆ ವ್ಯವಸ್ಥೆಯಿಂದ ಬಸ್ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಬಸ್‌ಗಳು ಆಗಮನ ನಿರ್ಗಮನದ ಬಗ್ಗೆ ನಿಖರ ಮಾಹಿತಿ ಜೊತೆಗೆ ಟ್ರ್ಯಾಕಿಂಗ್ ಸಿಸ್ಟಮ್‌ನ್ನು ಈ ಚತುರ ಸಾರಿಗೆ ವ್ಯವಸ್ಥೆ ಒಳಗೊಂಡಿದೆ.
ಚತುರ ಸಾರಿಗೆ ವ್ಯವಸ್ಥೆಯಡಿ ಪ್ರತಿ ಬಿಎಂಟಿಸಿ ಬಸ್‌ಗಳಿಗೂ ಜಿಪಿಎಸ್ ಸಿಸ್ಟಮ್‌ನ್ನು ಅಳವಡಿಸಲಾಗುತ್ತಿದ್ದು, ಬಸ್‌ಗಳು ಯಾವ ನಿಲ್ದಾಣಕ್ಕೆ ಎಷ್ಟು ಗಂಟೆಗೆ ಬರುತ್ತವೆ ಎಂಬುದನ್ನು ಪ್ರಯಾಣಿಕರು ತಮ್ಮ ಮೊಬೈಲ್ ಆಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಈ ಚತುರ ಸಾರಿಗೆಯ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳು ಕಾರ್ಯನಿರ್ವಹಿಸಲಿದೆ. ಹಾಗಾಗಿ ಚಿಲ್ಲರೆ ಇಲ್ಲ, ಕಂಡ್ಟಕರ್ ಜೊತೆ ಅನಗತ್ಯವಾದ ವಿವಾದಗಳಿಗೆ ಈ ವ್ಯವಸ್ಥೆ ಕೊನೆ ಹಾಡಲಿದೆ. ಈ ಚತುರ ಸಾರಿಗೆ ವ್ಯವಸ್ಥೆಯ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ ಕೌರ್ ಮುಖ್ಯಮಂತ್ರಿಗಳಿಗೆ ಕಂಟ್ರೋಲ್ ರೂಮ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಿ ಕಾರ್ಯಾಚರಣೆಯ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರ ನೀಡಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬಿಎಂಟಿಸಿ ಅಧ್ಯಕ್ಷ ನೇಮಿರಾಜ್ ಜೈನ್, ಉಪಾಧ್ಯಕ್ಷ ವಿ.ಎಸ್. ಆರಾಧ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣ್ ರೆಡ್ಡಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ ಕೌರ್, ಕೆಎಸ್‌ಎಸ್‌ಐಡಿಸಿ ಅಧ್ಯಕ್ಷ ಡಾ. ಗುರಪ್ಪ ನಾಯ್ಡು, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments are closed.