ರಾಷ್ಟ್ರೀಯ

ಮತ್ತೊಂದು ಪಠಾಣ್‍ಕೋಟ್ ರೀತಿ ದಾಳಿಗೆ ಜೆಇಎಂ ಸಂಚು

Pinterest LinkedIn Tumblr

patanಚಂಡೀಗಢ, ಮೇ 25-ಉತ್ತರ ಭಾರತವನ್ನು ಪ್ರಮುಖ ಗುರಿಯಾಗಿಟ್ಟುಕೊಂಡಿರುವ ಭಯೋತ್ಪಾದಕ ಸಂಘಟನೆಗಳು, ಪಠಾಣ್‍ಕೋಟ್ ವಾಯುನೆಲೆ ಮೇಲಿನ ದಾಳಿಯಂತಹ ಮತ್ತೊಂದು ದಾಳಿಗೆ ಸಜ್ಜಾಗಿವೆ.
ಪಾಕಿಸ್ತಾನ ಮೂಲದ ಜೈಷ್-ಎ-ಮೊಹ್ಮದ್ ಸಂಘಟನೆ ಈ ದಾಳಿಯ ನೇತೃತ್ವ ವಹಿಸಿದ್ದು, ಜೆಇಎಂಗೆ ಪಾಕ್ ಗೂಢಚಾರ ಸಂಸ್ಥೆ ಐಎಸ್‍ಐ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯರು ಸಾಥ್ ನೀಡುತ್ತಿದ್ದಾರ. ಮಿಲಿಟರಿ ಜಾಗೃತದಳ ಇಂತಹ ಒಂದು ಅತ್ಯಂತ ಗಂಭೀರ ವರದಿಯನ್ನು ಪಂಜಾಬ್ ಸರ್ಕಾರಕ್ಕೆ ನೀಡಿದೆ.

ಜೈಷ್-ಎ-ಮೊಹಮ್ಮದ್ ಕಮಾಂಡರ್ ಅವೈಸ್ ಮೊಹಮದ್‍ನನ್ನು ಉಗ್ರ ಸಂಘಟನೆ ಮಲೇಷ್ಯಾಕ್ಕೆ ಕಳುಹಿಸುತ್ತಿದ್ದು, ಅಲ್ಲಿ ನಕಲಿ ಮಲೇಷ್ಯಾ ಪಾಸ್‍ಪೆÇೀರ್ಟ್ ಪಡೆದು ಅದನ್ನು ಭಾರತದೊಳಕ್ಕೆ ಪ್ರವೇಶಿಸಲು ಅವೈಸ್ ಬಳಸಿಕೊಳ್ಳಲಿದ್ದಾನೆ. ಅವನು ಭಾರತ ಪ್ರವೇಶಿಸಿದೊಡನೆ ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಕಲ ಸಿದ್ಧತೆಯೂ ನಡೆದಿದೆ. ಅವೈಸ್ ಪಾಕಿಸ್ತಾನದ ಒಕಾರಾ ನಿವಾಸಿಯಾಗಿದ್ದು ಭಾರತದಲ್ಲಿ ನಡೆಸಬೇಕಾದ ಹೊಸ ದಾಳಿಗಳ ಹೊಣೆಯನ್ನು ಇವನ ಹೆಗಲಿಗೇ ಹಾಕಲಾಗಿದೆ.

ಪಠಾಣ್‍ಕೋಟ್ ವಾಯುನೆಲೆ ದಾಳಿಯ ತನಿಖೆಗೆಂದು ಪಾಕಿಸ್ತಾನ ತನಿಖಾ ತಂಡ ಇಲ್ಲಿಗೆ ಭೇಟಿ ನೀಡಿದ ನಂತರ ಕೆಲವೇ ದಿನಗಳಲ್ಲಿ ಮೇ 18 ರಂದು ಪಂಜಾಬ್ ಸರ್ಕಾರಕ್ಕೆ ಜಾಗೃತದಳ ಈ ವರದಿ ನೀಡಿದೆ.
ಈ ಹೊಸ ಸ್ಫೋಟಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ಜೆಇಎಂ, ಪಾಕಿಸ್ತಾನದ ಪಂಜಾಬ್ ಮತ್ತು ಖೈಬರ್ ಪದುಂಕ್ವಾಗಳಲ್ಲಿ 3 ಹೊಸ ಕಚೇರಿಗಳನ್ನು ತೆರೆದಿದೆ. ಹೊಸಕಚೇರಿಗಳು ಮತ್ತು ನೆಟ್‍ವರ್ಕ್ ಬಗ್ಗೆ ಜೆಇಎಂ ಉಸ್ತುವಾರಿ ನೋಡುತ್ತಿದೆ. ಕೋಹಟ್ ಮತ್ತು ಹಜಾರಾ ಪ್ರಾಂತ್ರಯಗಳಲ್ಲೂ ಕಾರ್ಯಪಡೆ ಸಿದ್ಧವಾಗಿದೆ. ಇನ್ನೊಂದೆಡೆ ಸಂಘಟನೆ ಹೊಸ ಸದಸ್ಯರ ಸೇರ್ಪಡೆ ಮತ್ತು ತರಬೇತಿಗಳನ್ನು ಜೆಇಎಂ ಮುಂದುವರಿಸಿದೆ. ಇದರೊಂದಿಗೆ ಹೊಸಬರ ತರಬೇತಿಗಾಗಿ ಬಾಲಕೋಟ್‍ನಲ್ಲಿ ಸುಸಜ್ಜಿತ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಬಹವಾಲ್ಪುರದಲ್ಲಿ ಈಗಾಗಲೇ ಹಲವು ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ.
ಈ ಮಧ್ಯೆ ಪಾಕಿಸ್ತಾನದವರಿರಬಹುದೆಂದು ಶಂಕಿಸಲಾಗಿರುವ ಸುಮಾರು 7,844 ದೂರವಾಣಿ ಕರೆಗಳು ಗೇಟ್‍ವೇ ಆಫ್ ಇಂಡಿಯನ್ ಸಂಸ್ಥೆಗೆ ಬಂದಿದ್ದು, ಬಹವಾಲ್ಪುರ್‍ನಿಂದಲೇ ಹೆಚ್ಚು ಕರೆಗಳು ಬಂದಿವೆ. ಅವುಗಳನ್ನು ಪರಿಶೀಲನೆಗೊಳಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬಹಿರಂಗಪಡಿಸಿದೆ.

Comments are closed.