ಕರ್ನಾಟಕ

ಮದುವೆಗೆ ನಿರಾಕರಿಸಿದ ಯುವತಿಗೆ ಪ್ರಿಯಕರನಿಂದ ಇರಿತ

Pinterest LinkedIn Tumblr

murder-knife

ಪಾಂಡವಪುರ: ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಿಯಕರ ತನ್ನ ಪ್ರಿಯತಮೆಗೆ ಚಾಕುವಿನಿಂದ ಇರಿದಿರುವ ಘಟನೆ ಪಾಂಡವಪುರ ಟೌನ್ ವಿ ಸಿ ಕಾಲೋನಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಪ್ರಿಯಕರ ರವಿ (27) ಹಾಗೂ ಪ್ರಿಯತಮೆ ಅಶ್ವಿನ (25) ಇಬ್ಬರೂ ಪರಸ್ಪರ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಇತ್ತೀಚೆಗೆ ತನ್ನನ್ನು ಮದುವೆಯಾಗುವಂತೆ ರವಿ ಅಶ್ವಿನಿಯನ್ನು ಬಲವಂತ ಮಾಡುತ್ತಿದ್ದ. ಇದಕ್ಕೆ ಎರಡೂ ಕುಟುಂಬದವರ ವಿರೋಧವಿತ್ತು. ಆದರೂ ನಿನ್ನೆ ರವಿ ತನ್ನನ್ನೇ ಮದುವೆಯಾಗುವಂತೆ ಅಶ್ವಿನಿಯನ್ನು ಬಲವಂತ ಮಾಡಿದ. ಇದರಿಂದ ಬೇಸತ್ತ ಅಶ್ವಿನ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡ ರವಿ ನಿನ್ನೆ ರಾತ್ರಿ ಅಶ್ವಿನಿಯ ಮನೆಗೆ ನುಗ್ಗಿ ಆಕೆಯನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಅದೃಷ್ಟವಶಾತ್ ಅಶ್ವಿನ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ವಿಷಯದ ಬಗ್ಗೆ ಮನೆಯವರು ಪಾಂಡವಪುರ ಟೌನ್ ಪೋಲಿಸ್ ಠಾಣೆಗೆ ದೂರು ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪರಾರಿಯಾಗಿರುವ ರವಿಯ ಪತ್ತಗಾಗಿ ಶೋಧನೆಯಲ್ಲಿ ತೊಡಗಿದ್ದಾರೆ.

ಪಾಂಡವಪುರ ಸಾರ್ವಜನಿಕ ಆಸ್ಪತ್ರೆ ತುರ್ತು ಚಿಕಿತ್ಸೆ ಪಡೆಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗಂ ಕರೆದುಕೊಂಡು ಹೋಗಿರುತ್ತಾರೆ.

Comments are closed.