ಕರ್ನಾಟಕ

ಎಬಿಡಿ ಅಬ್ಬರ-ಲಯನ್ಸ್ ತತ್ತರ ; ಆರ್ ಸಿಬಿ ಫೈನಲ್ ಗೆ: 4 ವಿಕೆಟ್ ಗಳ ರೋಚಕ ಜಯ

Pinterest LinkedIn Tumblr

Royal Challengers Bangalore players celebrates their won against Gujarat Lions during match 57 (Qualifier 1) of the Vivo IPL ( Indian Premier League ) 2016 between the Gujarat Lions and the Royal Challengers Bangalore held at The M. Chinnaswamy Stadium in Bangalore, India,  on the 24th May 2016 Photo by Deepak Malik / IPL/ SPORTZPICS

ಬೆಂಗಳೂರು: ಎಬಿ ಡಿವಿಲಿಯರ್ಸ್ (79*) ಮತ್ತು ಇಕ್ಬಾಲ್ ಅಬ್ದುಲ್ಲಾ (33*) ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಲಯನ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಗಳಿಸಿದೆ. ಜಯದೊಂದಿಗೆ ಆರ್ಸಿಬಿ ಐಪಿಎಲ್ 9ನೇ ಸೀಸನ್ನ ಫೈನಲ್ ಪ್ರವೇಶಿಸಿದೆ.

ಗುಜರಾತ್ ಲಯನ್ಸ್ ನೀಡಿದ 159 ರನ್ ಗುರಿಯನ್ನು ಆರ್ಸಿಬಿ 18.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ಗುಜರಾತ್ ಲಯನ್ಸ್ ನೀಡಿದ 159 ರನ್ ಗುರಿ ಬೆನ್ನತ್ತಿದ ಆರ್ಸಿಬಿ 29 ರನ್ ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಎಬಿ ಡಿವಿಲಿಯರ್ಸ್ ಸ್ಟುವರ್ಟ್ ಬಿನ್ನಿ (21) ಮತ್ತು ಇಕ್ಬಾಲ್ ಅಬ್ದುಲ್ಲಾ (33*) ಜತೆಗೂಡಿ ತಂಡಕ್ಕೆ ರೋಚಕ ಜಯ ತಂದಿತ್ತರು.

1 2

ಗುಜರಾತ್ ನೀಡಿದ 159ರನ್ ಗಳ ಸವಾಲಿನ ಮೊತ್ತ ಬೆನ್ನುಹತ್ತಿದ ಬೆಂಗಳೂರು ತಂಡ ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ (ಅಜೇಯ 79) ಮತ್ತು ಕೆಳ ಕ್ರಮಾಂಕದ ಆಟಗಾರರಾದ ಸ್ಟುವರ್ಟ್ ಬಿನ್ನಿ (21 ರನ್), ಅಬ್ದುಲ್ಲಾ (ಅಜೇಯ 33 ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

159 ರನ್ ಗಳ ಸವಾಲಿನ ಮೊತ್ತವನ್ನು ಸಕಾರಾತ್ಮಕವಾಗಿಯೇ ಬೆನ್ನು ಹತ್ತಿದ ಬೆಂಗಳೂರು ತಂಡಕ್ಕೆ ಗುಜರಾತ್ ತಂಡದ ಕುಲಕರ್ಣಿ ತಮ್ಮ ಮಾರಕ ಬೌಲಿಂಗ್ ಮೂಲಕ ಕಾಡಿದರು. ಆರಂಭಿಕರಾದ ಕ್ರಿಸ್ ಗೇಯ್ಲ್ 9 ರನ್ ಗೆ ಔಟ್ ಆದರೆ, ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಶೂನ್ಯಕ್ಕೇ ನಿರ್ಗಮಿಸಿದರು. ವಾಟ್ಸನ್ ಕೂಡ ಕೇವಲ 1 ರನ್ ಗಳಿಸಿ ಔಟ್ ಆದರೆ, ಬಳಿಕ ಬಂದ ಸಚಿನ್ ಬೇಬಿ ಶೂನ್ಯಕ್ಕೆ ಔಟ್ ಆದರು.

3

5

6

7

8

ಈ ಹಂತದಲ್ಲಿ ಆರ್ ಸಿಬಿ ಬಳಗದಲ್ಲಿ ಸೋಲಿನ ಭೀತಿ ಉಂಟಾಯಿತು. ಆದರೆ ಈ ಹಂತದಲ್ಲಿ ಎಬಿಡಿ ಜೊತೆಗೂಡಿದ ಕನ್ನಡಿಗ ಸ್ಟುವರ್ಟ್ ಬಿನ್ನಿ ಆರ್ ಸಿಬಿ ಎನ್ನಿಂಗ್ಸ್ ಗೆ ಜೀವ ತುಂಬಿದರು. ಒಂದೆಡೆ ಎಬಿಡಿ ಭರ್ಜರಿ ಹೊಡೆತಗಳ ಮೂಲಕ ರನ್ ಮಳೆಗರೆದರೆ, ಬಿನ್ನಿ ಕೂಡ ಸತತ ಬೌಂಡರಿಗಳ ಮೂಲಕ ಆರ್ ಸಿಬಿ ಇನ್ನಿಂಗ್ಸ್ ಗೆ ಜೀವ ತುಂಬಿದರು. ಈ ಹಂತದಲ್ಲಿ ಜಡೇಜಾ ಬೌಲಿಂಗ್ ನಲ್ಲಿ ಅಂಪೈರ್ ನೀಡಿದ ಅನುಮಾನಾಸ್ಪದ ತೀರ್ಪಿಗೆ ಬಲಿಯಾದ ಬಿನ್ನಿ ಪೆವಲಿಯನ್ ನತ್ತ ಹೆಜ್ಜೆ ಹಾಕಿದರು.

Iqbal Abdullah of Royal Challengers Bangalore celebrates the wicket of Aaron Finch of Gujarat Lions during match 57 (Qualifier 1) of the Vivo IPL ( Indian Premier League ) 2016 between the Gujarat Lions and the Royal Challengers Bangalore held at The M. Chinnaswamy Stadium in Bangalore, India,  on the 24th May 2016 Photo by Deepak Malik / IPL/ SPORTZPICS

10

11

Bengaluru :  Royal Challengers Bangalore's AB De Villiers plays a shot during the 1st qualifier IPL 2016 match against Gujarat Lions at Chinnaswamy Stadium in Bengaluru on Tuesday. PTI Photo by Shailendra Bhojak(PTI5_24_2016_000321B)

13

14

15

Sreenath Arvind of Royal Challengers Bangalore and Shane Watson of Royal Challengers Bangalore are congratulated for getting Gujarat Lions captain Suresh Raina wicket during match 57 (Qualifier 1) of the Vivo IPL (Indian Premier League) 2016 between the Gujarat Lions and the Royal Challengers Bangalore held at The M. Chinnaswamy Stadium in Bangalore, India,  on the 24th May 2016 Photo by Shaun Roy / IPL/ SPORTZPICS

ಆದರೆ ಬಳಿಕ ಎಬಿಡಿ ಜೊತೆ ಗೂಡಿದ ಬೌಲಿಂಗ್ ನಲ್ಲಿ ಮಿಂಚಿದ್ದ ಅಬ್ದುಲ್ಲಾ ಬ್ಯಾಟಿಂಗ್ ನಲ್ಲೂ ಮಿಂಚಿದರು. ಸ್ಫೋಟಕ ಬ್ಯಾಟ್ಸಮ್ ಎಬಿಡಿಗೆ ಭರ್ಜರಿ ಸಾಥ್ ನೀಡಿದ ಅಬ್ಲುಲ್ಲಾ 33 ರನ್ ಗಳಿಸಿದರು. ಅತ್ತ ಮತ್ತೊಂದು ತುದಿಯಲ್ಲಿ ತಮ್ಮ ಎಂದಿನ ಸ್ಫೋಟಕ ಆಟವಾಡಿದ ಎಬಿಡಿ ನೋಡ-ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿದರು. ಇನ್ನಿಂಗ್ಸ್ ನ 18ನೇ ಓವರ್ ಅಂತಿಮ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ ಅಬ್ದುಲ್ಲಾ ಆರ್ ಸಿಬಿ ಗೆಲುವನ್ನು ಖಚಿತ ಪಡಿಸದರು. 19ನೇ ಓವರ್ ನ 2ನೇ ಎಸೆತದಲ್ಲಿ ಅಬ್ದುಲ್ಲಾ ಪ್ರವೀಣ್ ಕುಮಾರ್ ಎಸೆದ ಲೋ ಫುಲ್ ಟಾಸ್ ಎಸೆತವನ್ನು ಫ್ಲಿಕ್ ಮಾಡುವ ಮೂಲಕ 2 ರನ್ ಕದಿಯುವುದರೊಂದಿಗೆ ಆರ್ ಸಿಬಿ ಜಯಭೇರಿ ಮೊಳಗಿಸಿತು.

ಅತ್ತ ಅಬ್ದುಲ್ಲಾ ಗೆಲುವಿನ ರನ್ ಭಾರಿಸುತ್ತಿದ್ದಂತೆಯೇ ಇತ್ತ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರು ಕ್ರೀಡಾಂಗಣಕ್ಕೆ ನುಗ್ಗಿ ಎಬಿಡಿ ಮತ್ತು ಆಬ್ದುಲ್ಲಾರ ಮೈಮೇಲೆ ಬಿದ್ದು ಗೆಲುವಿನ ಸಂಭ್ರಮಾಚರಣೆ ಮಾಡಿದರು.

ಗುಜರಾತ್ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಧವಳ್ ಕುಲಕರ್ಣಿ ಕೇವಲ 14 ರನ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಆರ್ ಸಿಬಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಬಿಡಿವಿಲಿಯರ್ಸ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Comments are closed.