ಕರ್ನಾಟಕ

ಬಲವಂತದ ಹೇರಿಕೆ ಸಲ್ಲದು: ಸಾಹಿತಿ ಅಬ್ದುಲ್ ಖಾಸಿಂ

Pinterest LinkedIn Tumblr

bala

ವಿಜಯಪುರ: ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದಕ್ಕಿಂತ ಭಾಷೆಯ ಮೇಲೆ ಪ್ರೀತಿ ಬೆಳೆಯುವಂತೆ ಮಾಡುವುದರಿಂದ ಉಳಿವಿಗೆ ಪೂರಕವಾಗುವುದು ಎಂದು ಸಾಹಿತಿ ಅಬ್ದುಲ್ ಖಾಸಿಂ ಹೇಳಿದರು.

ಮಹಂತಿನ ಮಠದಲ್ಲಿ ಜಿಲ್ಲಾಾ ಕಸಾಪ ವತಿಯಿಂದ ಆಯೋಜಿಸಿದ್ದ ಭಾಷಾ ಅಲ್ಪ ಸಂಖ್ಯಾತರ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷಾ ಅಲ್ಪಸಂಖ್ಯಾತರ ಏಳಿಗೆಗಾಗಿ ಸರಕಾರ ಅನೇಕ ಕಾಲೇಜುಗಳನ್ನು ನಿರ್ಮಿಸಿದೆ ಎಂದರು.

ಆದರೆ ಆಡಳಿತ ಮಂಡಳಿಗಳ ಲೋಪ-ದೋಷಗಳು ಹಾಗೂ ಇನ್ನಿತರ ಸಮಸ್ಯೆಗಳಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೇ, ಭಾಷಾ ಅಲ್ಪಸಂಖ್ಯಾತರ ಏಳಿಗೆಗೆ ಕಂಟಕವಾಗಿವೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿ, ಕಸಾಪವು ಕೇವಲ ಸಾಹಿತ್ಯದ ಪಥ ಮಾತ್ರದಲ್ಲೇ ಉಳಿಯದೇ, ಭಾಷೆ, ನಾಡು, ಸಂಸ್ಕೃತಿ ಇನ್ನಿತರ ಅನೇಕ ವಿಷಯಗಳತ್ತ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಸೃಜನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಭಾಷಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಖಲೀಂ ಪಾಷಾ ಹಾಗೂ ದೇವನಹಳ್ಳಿ ತಾಲೂಕು ಭಾಷಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಅನೀಸ್-ಉರ್-ರೆಹಮಾನ್ ಅವರನ್ನು ಆಯ್ಕೆ ಮಾಡಲಾಯಿತು.

ಕಸಾಪ ಹಿರಿಯ ಉಪಾಧ್ಯಕ್ಷ ಕೆ. ಮುನಿರಾಜು, ಪುರಸಭಾಧ್ಯಕ್ಷೆ ಅನಸೂಯಮ್ಮ ಸಂಪತ್ ಕುಮಾರ್, ಸೂರ್ಯನಾರಾಯಣ್, ಕಸಾಪ ಪದಾಧಿಕಾರಿ ಚಂದ್ರಶೇಖರ್ ಹಡಪದ್, ವಿ.ಎನ್. ರಮೇಶ್, ಶಿಕ್ಷಕ ಪರಮೇಶ್, ಜಿಲ್ಲಾಾ ಕೋಶಾಧ್ಯಕ್ಷ ಎಂ. ನಾರಾಯಣಸ್ವಾಮಿ, ಸಾಂಸ್ಕೃತಿಕ ತಂಡದ ಅಧ್ಯಕ್ಷ ನಾಯ್ಡು ಮತ್ತು ಗಾಯಕ ಮಹಾತ್ಮಾಂಜನೇಯ, ತಬಲಾ ರಾಮಕೃಷ್ಣಪ್ಪ, ಹಾಗೂ ಸಂಗೀತ ತಂಡದ ಸದಸ್ಯರು ಇದ್ದರು.

‘ಪ್ರತಿ ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಾಣದ ಗುರಿಯನ್ನು ಕಸಾಪವು ಹೊಂದಿದ್ದು, ಸ್ಥಳೀಯ ಆಡಳಿತ ಹಾಗೂ ಸರಕಾರದೊಂದಿಗೆ ಚರ್ಚಿಸಬೇಕು. ಸಾಹಿತ್ಯ ಭವನದ ಅವಶ್ಯಕತೆಯನ್ನು ಮನಗಾಣಿಸಿಕೊಡುವ ಪ್ರಯತ್ನ ಚಾಲ್ತಿಯಲ್ಲಿದೆ’
– ಅಬ್ದುಲ್ ಖಾಸಿಂ, ಸಾಹಿತಿ

Comments are closed.