ಕರ್ನಾಟಕ

‘ಜಗ್ಗುದಾದಾ’ದಲ್ಲಿ ದರ್ಶನ್ ಗೆಳೆಯನ ಪಾತ್ರಕ್ಕೆ ಈ ಆಟೊ ಚಾಲಕನಿಗೆ ಒಲಿದು ಬಂದ ಭಾಗ್ಯ !

Pinterest LinkedIn Tumblr

yuva

ಬೆಂಗಳೂರು: ನಟ ದರ್ಶನ್ ಅಭಿನಯದ ‘ಜಗ್ಗು ದಾದಾ’ದಲ್ಲಿ ನಾಯಕ ನಟನ ಗೆಳೆಯನ ಪಾತ್ರ ಪಡೆಯಲು 27 ವರ್ಷದ ಬೆಂಗಳೂರಿನ ಆಟೋ ಚಾಲಕ ಯುವನಿಗೆ ಸಾಧ್ಯವಾಗಿದೆ.

ಈ ಹಿಂದೆ ‘ವರದನಾಯಕ’, ‘ದೃಶ್ಯ’, ‘ವೀರ’, ‘ಶಿವಾಜಿನಗರ’ ಮತ್ತು ‘ಐರಾವತ’ ಸಿನೆಮಾಗಳಲ್ಲಿ ಬಂದು ಮಾಯವಾಗುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಯುವ, ಈಗ ನಟ ದ್ರಶನ್ ಗೆಳೆಯನಾಗಿ ಇಡೀ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದಕ್ಕಾಗಿ ತಾವು ಅಣ್ಣ ಎಂದು ಕರೆಯುವ ಚಾಲೆಂಜಿಗ್ ಸ್ಟಾರ್ ಗೆ ಧನ್ಯವಾದ ಹೇಳುವ ಯುವ ”ಐರಾವತ’ ಸೆಟ್ ಗಳಲ್ಲಿ ಇನ್ನೂ ಹಲವಾರು ಯುವ ನಟರ ಜೊತೆಗೆ ನಾನೂ ಒಬ್ಬನಾಗಿದ್ದೆ. ಅಣ್ಣ ನನ್ನನ್ನು ಕರೆದು ‘ಜಗ್ಗು ದಾದಾ’ ಸಿನೆಮಾದಲ್ಲಿ ಪಾತ್ರ ನೀಡುವುದಾಗಿ ಹೇಳಿ, ನನಗೆ ಆಸಕ್ತಿಯಿದೆಯಾ ಎಂದು ಕೇಳಿದಾಗ ಹೌದು ಎಂದೆ” ಎನ್ನುತ್ತಾರೆ ಯುವ.

ಬೆಳಗಿನ ಸಮಯದಲ್ಲಿ ಆಟೋ ರಿಕ್ಷಾ ಓಡಿಸುವ ಯುವ ಸಂಜೆಯ ವೇಳೆಯಲ್ಲಿ ನೃತ್ಯ ಕಲಿಯುತ್ತಾರಂತೆ. “ನಾನು ಒಳ್ಳೆಯ ನೃತ್ಯಕಾರ ಅಲ್ಲ ಎಂದು ನನಗೆ ತಿಳಿಯಿತು. ಆದುದರಿಂದ ‘ಜಗ್ಗು ದಾದ’ ಸಿನೆಮಾದ ಹಾಡಿನಿಂದ ಹಿಂದೆ ಉಳಿಯಬೇಕಾಯಿತು. ಆದುದರಿಂದ ನೃತ್ಯ ಕಲಿಯಲು ಪಾರಂಭಿಸಿದೆ” ಎನ್ನುತಾರೆ ಯುವ.

‘ಜಗ್ಗು ದಾದ’ ಸಿನೆಮಾ ನಿರ್ದೇಶಕ ರಾಘವೇಂದ್ರ ಹೆಗಡೆ ತಮ್ಮ ಜೊತೆ ಹೆಚ್ಚು ತಾಳ್ಮೆಯಿಂದ ನಡೆದುಕೊಂಡರು ಎಂದು ತಿಳಿಸುತ್ತಾರೆ ಯುವ. ಕಾರವಾರದ ಬನವಾಸಿಯ ಮೂಲದವರಾದ ಯುವ, ತಮ್ಮ 14 ನೆಯ ವಯಸ್ಸಿನಲ್ಲಿ ಬೆಂಗಳೂರಿಗೆ ವಲಸೆ ಬಂದರಂತೆ. ಅಲ್ಲಿ ವ್ಯವಸ್ಥಿತ ಜೀವನ ನಡೆಸಬಹುದಾಗಿದ್ದರೂ ತಮ್ಮ ಕಾಲ ಮೇಲೆ ನಿಲ್ಲುವ ಛಲದಿಂದ ಬೆಂಗಳೂರಿಗೆ ಬಂದೆ ಎನ್ನುವ ಅವರು “ನಮ್ಮ ತಂದೆ ಮನಶಾಸ್ತ್ರದಲ್ಲಿ ಪದವೀಧರರು. ಆದರೆ ನಾನು ಮತ್ತು ನನ್ನ ಸಹೋದರ ಓದಲಿಲ್ಲ. ಆದರೆ ನಾನು ಅವರ ಮೇಲೆ ಅವಲಂಬಿತನಾಗಲಿಲ್ಲ. ಮೊದಲು ಕ್ಲೀನರ್ ಆಗಿ ನಂತರ ಸೇಲ್ಸ್ ಕೆಲಸಗಾರನಾಗಿ ಕೆಲಸ ಮಾಡಿದೆ. ಈಗ ನನ್ನ ಜೀವನದಲ್ಲಿ ಸಾಕಷ್ಟು ಘಟಿಸುತ್ತಿದೆ” ಎನ್ನುತ್ತಾರೆ ಯುವ.

ಸಣ್ಣವನಿದ್ದಾಗ ಹಿಂದಿ ಸಿನೆಮಾಗಳನ್ನು ನೋಡುತ್ತಿದ್ದೆ ಎನ್ನುವ ಅವರು ದರ್ಶನ್ ಅವರ ‘ಮೆಜೆಸ್ಟಿಕ್’ ನೋಡಿದ ಮೇಲೆ ಕನ್ನಡ ಸಿನೆಮಾಗಳನ್ನು ನೋಡಲು ಪ್ರಾರಂಭಿಸಿದರಂತೆ. ರಾಗಿಣಿ ದ್ವಿವೇದಿ ಅವರ ‘ವೀರ ರಣಚಂಡಿ’ ಸಿನೆಮಾದಲ್ಲೂ ಪಾತ್ರ ಗಳಿಸಿದ್ದಾರೆ ಯುವ.

Comments are closed.