ಮನೋರಂಜನೆ

ರಾಧಿಕಾ ಅಪ್ಟೆ ಕುರಿತು ರಜನಿಕಾಂತ್ ಹೇಳಿದ್ದೇನು?

Pinterest LinkedIn Tumblr

rajanikanth

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕಬಾಲಿ ಚಿತ್ರ ಟೀಸರ್‍ನಿಂದಲೇ ಈಗಾಗಲೇ ಸುದ್ದಿ ಮಾಡಿದೆ. ಇದೀಗ ರಜನಿ ಜೊತೆಗೆ ಜೋಡಿಯಾಗಿ ನಟಿಸಿರುವ ರಾಧಿಕಾ ಅಪ್ಟೆ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು. ಸೂಪರ್ ಸ್ಟಾರ್ ರಜನಿ ಜೊತೆ ನಟಿಸುಲು ಸೌತ್ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಅಂತಹದರಲ್ಲಿ ಕಬಾಲಿ ಚಿತ್ರದಲ್ಲಿ ನಟಿಸಲು ರಾಧಿಕಾಗೆ ಅವಕಾಶ ಸಿಕ್ಕಿದೆ. ಇದೀಗ ಚಿತ್ರದ ಚಿತ್ರೀಕರಣ ಶೇ.60ರಷ್ಟು ಮುಗಿದಿದ್ದು, ರಾಧಿಕಾ ನಟನೆ ನೋಡಿರುವ ರಜನಿ ಸಂದರ್ಶನವೊಂದರಲ್ಲಿ ಆಕೆಯನ್ನು ಹಾಡಿಹೊಗಳಿದ್ದಾರೆ.

ರಜನಿ ಪ್ರಕಾರ ರಾಧಿಕಾ ಫೆಂಟಾಸ್ಟಿಕ್ ಆಕ್ಟರ್ ಎನಿಸಿದ್ದು, ಈ ಹೇಳಿಕೆಯಿಂದ ರಾಧಿಕಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಚಿತ್ರದಲ್ಲಿ ರಾಧಿಕಾ ರಜನಿ ಪತ್ನಿಯಾಗಿ ನಟಿಸುತ್ತಿದ್ದಾರೆ. ಪ ರಂಜಿತ್ ನಿರ್ದೇಶನದ ಈ ಚಿತ್ರ ರಿಯಲ್ ಗ್ಯಾಂಗ್‍ಸ್ಟರ್ ಕಬಾಲೀಶ್ವರನ್ ಕಥೆಯಾಗಿದ್ದು ಜುಲೈ 1ಕ್ಕೆ ತೆರೆಮೇಲೆ ಬರಲಿದೆ.

Comments are closed.