ಬೆಂಗಳೂರು, ಮೇ ೨೨: ನಗರದ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಐದು ಮೂವತ್ತರ ಸುಮಾರಿಗೆ ೩ ತಿಂಗಳ ಹಸುಗೂಸು ಪತ್ತೆಯಾಗಿದೆ.
ಕೆಎ-೫೦ಎಫ್೦೧೮ ನಂಬರಿನ ಬಸ್‌ನಲ್ಲಿ ಹೆಣ್ಣು ಮಗು ಸಿಕ್ಕಿದೆ. ಮೊದಲಿಗೆ ಚಾಲಕ ಹಾಗೂ ನಿರ್ವಾಹಕ ಬಸ್‌ನಲ್ಲಿ ಬೆಡ್ ಶೀಟ್ ಇರುವುದನ್ನು ನೋಡಿದ್ದರು. ಅದರಲ್ಲಿ ಮಗು ಇರುವುದು ಖಾತರಿಯಾಗಿ ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ರಕ್ಷಣೆ ಮಾಡಿ ಇದೀಗ ಬಾಸ್ಕೊ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಮೆಜೆಸ್ಟಿಕ್‌ನಿಂದ ಕೂಡ್ಲುಗೆ ಹೋಗುವ ಬಸ್‌ನಲ್ಲಿ ಚಾಲಕನ ಹಿಂಬದಿ ಸೀಟಿನಲ್ಲಿ ಈ ಮಗು ಪತ್ತೆಯಾಗಿದೆ. ಈ ಬಸ್ ಡಿಪೋದಿಂದ ನಿಲ್ದಾಣಕ್ಕೆ ಬಂದಿತ್ತು.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ
Comments are closed.