ಕರ್ನಾಟಕ

ಲಾಟರಿ ಹಗರಣದ ಸುಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ; ಎಸಿಬಿಗೆ ದೂರು

Pinterest LinkedIn Tumblr

krishna

ಬೆಂಗಳೂರು: ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೇರಿದಂತೆ 10 ಜನರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಶನಿವಾರ ದೂರು ದಾಖಲಾಗಿದೆ.

ಕರ್ನಾಟಕ ರಾಜ್ಯ ಲಾಟರಿ ಮಾರಾಟಗಾರರು ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಸಿ. ರಾಮಕೃಷ್ಣ ಅವರು ಈ ದೂರು ದಾಖಲಿಸಿದ್ದಾರೆ.

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅಕ್ರಮವಾಗಿ ಲಾಟರಿ ದಂಧೆ ನಡೆಸಲು ನೆರವು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 2001-07ರ ಸಾಲಿನಲ್ಲಿ ಲಾಟರಿ ಮಾರಾಟದಲ್ಲಿ ನಡೆದಿರುವ ಹಗರಣದ ಕುರಿತು ತನಿಖೆ ನಡೆಸುವಂತೆ ರಾಮಕೃಷ್ಣ ದೂರಿನಲ್ಲಿ ಮನವಿ ಮಾಡಿದ್ದಾರೆ.

ಆನ್‌ಲೈನ್‌ ಲಾಟರಿ, ಇತರ ರಾಜ್ಯಗಳ ಒಂದಂಕಿ ಮತ್ತು ಎರಡಂಕಿ ಲಾಟರಿ ಗಳನ್ನು ಕರ್ನಾಟಕದಲ್ಲಿ 2001ರಲ್ಲಿ ಆರಂಭಿಸಲಾಯಿತು. ಸರ್ಕಾರಕ್ಕೆ ವರ ಮಾನ ಸಿಗದಿದ್ದರೂ ಸಿಕ್ಕಿಂ, ನಾಗಾ ಲ್ಯಾಂಡ್, ಭೂತಾನ್, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ಗೋವಾ ರಾಜ್ಯಗಳ ನೂರಕ್ಕೂ ಹೆಚ್ಚು ಲಾಟರಿಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಯಿತು.

ಎಸ್‌.ಎಮ್‌.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲಾಟರಿ ಮಾರಾಟದಿಂದ ಬಂದ ಲಾಭವನ್ನು ತಮ್ಮ ಕ್ಷೇತ್ರದಲ್ಲಿ ಬಿಸಿ ಊಟಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಸಿಎಜಿ ನಿಯಮದ ಪ್ರಕಾರ ಒಂದು ಕಂಪೆನಿಗೆ ಮಾತ್ರ ಲಾಟರಿ ಪರವಾನಿಗೆ ನೀಡಲಾಗಿತ್ತು. ನಂತರ ಅನಧಿಕೃತವಾಗಿ ಬೇರೆ ಬೇರೆ ಕಂಪನಿಗಳಿಗೂ ಅಕ್ರಮವಾಗಿ ಪರವಾನಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

Comments are closed.