
ಕೃಷ್ಣರಾಜಪೇಟೆ: ತಮ್ಮ ಎರಡು ವರ್ಷಗಳ ಪ್ರೀತಿಗೆ ಪೋಷಕರಿಂದ ಅಡ್ಡಿಯಾಗಬಹುದೆಂದು ಹೆದರಿ ಮನೆಯನ್ನು ಬಿಟ್ಟು ಓಡಿಹೋಗಿದ್ದ ಯುವ ಪ್ರೇಮಿಗಳು ಇಂದು ಸರ್ಕಲ್‍ಇನ್ಸ್‍ಪೆಕ್ಟರ್ ಕೆ.ಸಂತೋಷ್ ಅವರ ನೇತೃತ್ವದಲ್ಲಿ ಪೋಷಕರ ಮನವೊಲಿಸಿ ಸತಿ-ಪತಿ ಗಳಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಾರ್ಗೋನಹಳ್ಳಿಯ ಲಕ್ಕೇಗೌಡ ಪ್ರೇಮಮ್ಮ ದಂಪತಿಗಳ ಪುತ್ರಿ ಮೇಘನಾ(19) ಮತ್ತು ರಾಮನಹಳ್ಳಿಯ ರಾಜೇಗೌಡ ಕೆಂಪಮ್ಮ ದಂಪತಿಗಳ ಪುತ್ರ ಹರೀಶ್(22) ಕಳೆದ ಎರಡು ವರ್ಷಗಳಿಂದಲೂ ಪರಸ್ಪರ ಇಷ್ಟಪಟ್ಟು ಗಾಢವಾಗಿ ಪ್ರೀತಿಸುತ್ತಿದ್ದರು. ಮೇಘನಾ ಅವರ ಪೋಷಕರು ಬೇರೊಬ್ಬ ಹುಡುಗನೊಂದಿಗೆ ವಿವಾಹ ಮಾಡಲು ಸಿದ್ಧತೆಯನ್ನು ನಡೆಸುತ್ತಿರುವುದನ್ನು ತಿಳಿದ ಮೇಘನಾ ತನ್ನ ಸ್ನೇಹಿತನಾದ ಹರೀಶನಿಗೆ ತನ್ನ ಪೋಷಕರು ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ತಿಳಿಸಿದಾಗ ಇಬ್ಬರೂ ಒಂದು ವಾರದ ಹಿಂದೆ ಮನೆಯನ್ನು ಬಿಟ್ಟು ಓಡಿಹೋಗಲು ನಿರ್ಧಾರ ಮಾಡಿಕೊಂಡರು.
ತಮ್ಮ ವಿವಾಹಕ್ಕೆ ಹರೀಶನ ಕುಟುಂಬದವರು ತೀರಾ ಬಡವರಾಗಿರುವುದರಿಂದ ತನ್ನ ಪೋಷಕರು ವಿವಾಹಕ್ಕೆ ಒಪ್ಪುವುದಿಲ್ಲ ಎಂಬುದನ್ನು ತಿಳಿದ ಮೇಘನಾ ಬಡವನಾದರೂ ತನ್ನನ್ನು ಚೆನ್ನಾಗಿ ನೋಡಿಕೊಂಡು ಒಳ್ಳೆಯ ಜೀವನ ನಡೆಸಲು ಸಹಕರಿಸುವ ಜೊತೆಗೆ ಕಷ್ಠಸುಖಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕುವುದಾಗಿ ಹರೀಶನೊಂದಿಗೇ ವಿವಾಹವಾಗಿ ಜೊತೆಯಲ್ಲಿ ಹೆಜ್ಜೆ ಹಾಕುವುದಾಗಿ ತಿಳಿಸಿ ತಮ್ಮ ಪ್ರೀತಿಗೆ ಪೋಷಕರಿಂದ ಅಡ್ಡಿಯಿರುವುದಾಗಿ ತಿಳಿಸಿ ವೃತ್ತ ಆರಕ್ಷಕ ನಿರೀಕ್ಷಕರಾದ ಕೆ.ಸಂತೋಷ್ ಅವರ ಮುಂದೆ ಶರಣಾಗಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು.
ವೃತ್ತ ನಿರೀಕ್ಷಕರಾದ ಕೆ.ಸಂತೋಷ್ ಅವರು ಇಬ್ಬರೂ ಪೋಷಕರನ್ನು ಕರೆಸಿ ಮನೊವೊಲಿಸಿ ಸಂಧಾನ ಮಾತುಕತೆಯನ್ನು ನಡೆಸಿ ವಿವಾಹಕ್ಕೆ ಒಪ್ಪಿಸಿದರು. ಕುರುಬ ಸಮೂದಾಯದ ಮುಖಂಡರಾದ ಎಲ್.ಪಿ.ನಂಜಪ್ಪ, ಕೆ.ಆರ್.ರವೀಂದ್ರಬಾಬೂ. ಕಾಳೇಗೌಡ, ಮಾರ್ಗೋನಹಳ್ಳಿ ದೇವರಾಜು ಅವರ ಸಮ್ಮುಖದಲ್ಲಿ ಪೋಷಕರು ಹಾಗೂ ಮನೆ ಬಿಟ್ಟು ಓಡಿಹೋಗಿದ್ದ ಪ್ರೇಮಿಗಳ ನಡುವೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದ ಸಮಾಜದ ಮುಖಂಡರು ಕೆ.ಆರ್.ಪೇಟೆ ಪೋಲಿಸರ ಸಮಕ್ಷಮದಲ್ಲಿ ಹಾರ ಬದಲಾಯಿಸಿ ಮದುವೆ ಮಾಡಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಹಾಯ ಮಾಡಿದರು.
ಕಷ್ಠಸುಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ: ಕೆ.ಆರ್.ಪೇಟೆ ಮಹಿಳಾ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ಮೇಘನಾ ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿರುವ ಹರೀಶ್ ಇಬ್ಬರೂ ಒಂದಾಗಿ ಬಾಲ ರಥವನ್ನು ಎಳೆಯಲು ನಿರ್ಧಾರ ಕೈಗೊಂಡಿದ್ದು ಒಬ್ಬರೂ ಮದುವೆಯಾದರೂ ಓದನ್ನು ಮುಂದುವರೆಸಿ ಪಧವೀಧರರರಾಗುತ್ತೇವೆ. ಕಷ್ಠವನ್ನು ಧೈರ್ಯದಿಂದ ಎದುರಿಸುತ್ತೇವೆ.
ತಮ್ಮ ಪೋಷಕರು ನಮಗೆ ತೊಂದರೆ ನೀಡದೇ ನಮ್ಮ ಪಾಡಿಗೆ ನಮ್ಮನ್ನು ಬದುಕಲಕು ಬಿಟ್ಟರೆ ಸಾಕು ಎಂದು ಮೇಘನಾ ಮಾಧ್ಯಮ ಮಿತ್ರರು ಹಾಗೂ ಸಮಾಜದ ಬಂಧುಗಳಲ್ಲಿ ಮನವಿ ಮಾಡಿದರು. ಪೋಲಿಸರು ತಮಗೆ ರಕ್ಷಣೆ ನೀಡಬೇಕು ಎಂದು ಕೈಮುಗಿದು ಮನವಿ ಮಾಡಿದರು.
Comments are closed.