
ಬೆಂಗಳೂರು: ಸ್ಥಳೀಯ ಬಿಜೆಪಿ ಮುಖಂಡ ರಾಜಣ್ಣ ಅಲಿಯಾಸ್ ಕುಂಟರಾಜಣ್ಣ ಅವರನ್ನು ದುಷ್ಕರ್ಮಿಗಳು ಮರದತುಂಡಿನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆಗೈದು ಪರಾರಿಯಾಗಿರುವ ದುರ್ಘಟನೆ ಚಂದ್ರಲೇಔಟ್‌ನಲ್ಲಿ ನಡೆದಿದೆ.
ಮಾರುತಿನಗರದ ಮನೆಯಲ್ಲಿ ಮಲಗಿದ್ದ ರಾಜಣ್ಣ(55)ಅವರನ್ನು ಮಧ್ಯರಾತ್ರಿ 12.30ರ ವೇಳೆ ಎಬ್ಬಿಸಿಕೊಂಡು ಹೊರಗೆ ಕರೆದೊಯ್ದ ದುಷ್ಕರ್ಮಿಗಳು ಚಂದ್ರಲೇಔಟ್‌ನ ಹೆಚ್‌ಡಿಎಫ್‌ಸಿ ಬ್ಯಾಂಕಿನ ಬಳಿಯ ಶಿರಾಗ್ ಬಾರ್ ಸಮೀಪ ಅವರ ತಲೆಗೆ ಹಿಂಬದಿಯಿಂದ ಮರದ ತುಂಡಿನಿಂದ ಹೊಡೆದು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
ಮಾರುತಿನಗರದಲ್ಲಿ ಬಿಜೆಪಿ ರಾಜಣ್ಣ ಎಂದೇ ಗುರುತಿಸಿಕೊಂಡಿದ್ದ ಅವರು ಸಾಮಾಜಿಕ ಸೇವಾ ಕೆಲಸಗಳಲ್ಲಿ ತೊಡಗಿದ್ದರು ರಾತ್ರಿ ಅವರನ್ನು ನಾಗರಾಜ್ ಎಂಬಾತ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದು ಆತನೇ ಸ್ನೇಹಿತರ ಜೊತೆ ಸೇರಿ ಈ ಕೃತ್ಯವೆಸಗಿದ್ದಾನೆ ಎಂದುಪೊಲೀಸರು ಶಂಕಿಸಿದ್ದಾರೆ.
ರಾಜಣ್ಣ ಅವರಿಗೆ ಜೊತೆಯಲ್ಲಿರುವವರು ಧೂಮಪಾನ ಮಾಡುತ್ತಿರುವುದನ್ನು ಸಹಿಸುತ್ತಿರಲಿಲ್ಲ ಅದೇ ವಿಚಾರವಾಗಿ ಜಗಳ ನಡೆದು ಕೊಲೆ ನಡೆದಿರಬಹುದು ಎನ್ನಲಾಗಿದೆ ಚಂದ್ರಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
Comments are closed.