ಕರ್ನಾಟಕ

ಶಬರಿಮಲೆ ಅಯ್ಯಪ್ಪಸ್ಸಾಮಿ ದರ್ಶನ ಮಾಡಿ ಬಂದ ಜನಾರ್ದನ ರೆಡ್ಡಿ

Pinterest LinkedIn Tumblr

reddy

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದಿರುಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಶಬರಿಮಲೆ ಅಯ್ಯಪ್ಪಸ್ಸಾಮಿ ದರ್ಶನ ಮಾಡಿ ಬಂದಿದ್ದಾರೆ.

ತಮ್ಮ ಕಷ್ಟಗಳು ತೀರಲಿ, ಆರೋಪಗಳಿಂದ ಮುಕ್ತರಾಗುವಂತೆ ಮಾಡಿ ಎಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರಲ್ಲಿ ಜನಾರ್ದನ ರೆಡ್ಡಿ ಹರಕೆ ಹೊತ್ತಿದ್ದರು, ಈ ಹಿನ್ನೆಲೆಯಲ್ಲಿ ಹರಕೆ ತೀರಿಸಲು ರೆಡ್ಡಿ ತಮ್ಮ ಪುತ್ರ ಹಾಗೂ ಸ್ನೇಹಿತರ ಜೊತೆಗೂಡಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.

ಅಯ್ಯಪ್ಪ ದರ್ಶನ ಪಡೆದ ಜನಾರ್ಧನ ರೆಡ್ಡಿ ಅವರು ಶುಕ್ರವಾರ ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ್ದಾರೆ. ಜನಾರ್ಧನ ರೆಡ್ಡಿ ಅವರೊಂದಿಗೆ ಸಂಸದ ಶ್ರೀರಾಮಲು, ಶಾಸಕ ನಾಗೇಂದ್ರ ಹಾಗೂ ಸ್ನೇಹಿತರು ಶಬರಿಮಲೆಗೆ ತೆರಳಿದ್ದರು ಎನ್ನಲಾಗಿದೆ.

Comments are closed.