ಕರ್ನಾಟಕ

ಸರಕಾರಿ ಶಾಲೆಗಳ ಬಗ್ಗೆ ತಪ್ಪು ಕಲ್ಪನೆ ಬಿಡಬೇಕು

Pinterest LinkedIn Tumblr

holಹೊಳಲ್ಕೆರೆ: ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಜೆ.ಸಲಗೆರೆ ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷ ಅಭಿಯಾನ ಸೇರಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮ್ಮ ನಡೆ ಸರಕಾರಿ ಶಾಲೆ ಕಡೆ’ ಕಾರ್ಕ್ರಮದಲ್ಲಿ ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಆದರೆ ಮಕ್ಕಳು ಶಾಲೆಯಲ್ಲಿ ಏನೇನೂ ಕಲಿತಿದ್ದಾರೆ ಎಂಬುದನ್ನು ಪುನರಾವರ್ತಿಸುವ ಮನೋಭಾವನೆ ಪೋಷಕರಲ್ಲಿಲ್ಲ. ಹೀಗಾಗಿ ಸರಕಾರಿ ಶಾಲೆಗಳ ಗುಣಮಟ್ಟ ತಿಳಿಯುತ್ತಿಲ್ಲ ಎಂದರು.
ವಕೀಲ ಬುರಾನ್ ಬೇಗ್ ಮಾತನಾಡಿ, ವಿದ್ಯೆ ಕದಿಯುವ ವಸ್ತುವಲ್ಲ. ಆದರೆ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಸರಿಯಲ್ಲಿ. ಪೋಷಕರು ಸರಕಾರಿ ಶಾಲೆಗಳ ಬಗ್ಗೆ ತಿಳಿದುಕೊಳ್ಳಬೇಕಾದ್ದು ಬಹಳಷ್ಟಿದೆ ಎಂದರು.

ಬಿಇಒ ಡಿ.ಎ.ತಿಮ್ಮಣ್ಣ ಮಾತನಾಡಿ, ಸರಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜತೆ, ಅನೇಕ ಸೌಲಭ್ಯ ನೀಡುತ್ತಿದೆ. ಪೋಷಕರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅನೇಕ ತರಬೇತಿ ನೀಡುವ ಮೂಲಕ ಶಿಕ್ಷಕರ ಜ್ಞಾನ ಹೆಚ್ಚಿಸಲಾಗುತ್ತಿದೆ. ಶಾಲೆಗಳಲ್ಲಿ ಪೋಷಕರ ಸಭೆ ಕರೆದರೆ ಬೆರಳೆಣಿಕೆಯಷ್ಟು ಪೋಷಕರು ಇರುತ್ತಿಲ್ಲ. ಅದೇ ಖಾಸಗಿ ಶಾಲೆಗಳಲ್ಲಾದರೆ ಹೆಚ್ಚೆಚ್ಚು ಪೋಷಕರು ಭಾಗವಹಿಸುತ್ತಾರೆ. ಅದಕ್ಕೆ ಕಾರಣ ಅಲ್ಲಿ ನೀಡಿರುವ ಡೊನೇಷನ್ ಎಂದರು.
ಬಿಆರ್‌ಸಿ ಲೇಪಾಕ್ಷಪ್ಪ, ಪಪಂ ಸದಸ್ಯ ಅಲ್ಲಾಭಕಷ್, ಸಜಿಲ್, ಕೆ.ಸಿ.ರಮೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಎಸ್.ರುದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕಾರ್ಯದ್ಯಕ್ಷ ವರದರಾಜ್ ಇದ್ದರು.

Comments are closed.