
ಹೊನ್ನಾಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸಾದ ಸಂತೋಷಕ್ಕೆ ಪೊಷಕರು, ವಿದ್ಯಾರ್ಥಿಗಳು ಪರಸ್ಪರ ಕೇಕ್ ಹಂಚಿಕೊಂಡು ತಿಂದು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟ್ಟಣದ ವಿದ್ಯಾರ್ಥಿಗಳು ಮತ್ತು ಪೊಷಕರು ಪಟ್ಟಣದ ಬೇಕರಿಯೊಂದರಿಂದ ಕೇಕ್ ಖರೀದಿಸಿ ಮಂಗಳವಾರ ಸಂಜೆ ಪರಸ್ಪರರು ತಿನ್ನಿಸಿದ್ದರು. ಆದರೆ ಕೇಕ್ ಸೇವಿಸಿದ ಸ್ವಲ್ಪ ಹೊತ್ತಿನಲ್ಲಿ ವಾಂತಿ, ಭೇಧಿ ಶುರುವಾಗಿ ಅಸ್ವಸ್ತಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಎಲ್ಲರೂ ಕೇಕ್ ತಿಂದಿರುವುದಾಗಿ ಹೇಳಿದಾಗ, ಎಲ್ಲರೂ ಒಂದೇ ಅಂಗಡಿಯಿಂದ ಖರೀದಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ವಿಶ್ವವಾಣಿಯೊಂದಿಗೆ ಮಾತನಾಡಿದ ಸರಕಾರಿ ಆಸ್ಪತ್ರೆ ವೈದ್ಯ ಡಾ.ರಾಜಕುಮಾರ, ಕೋಳಿ ಜ್ವರ ಎಲ್ಲೆಡೆ ಪಸರಿಸಿದ್ದರಿಂದ ಕೇಕ್‌ಗೆ ಬಳಸಿದ ಮೊಟ್ಟೆ ವಿಷಪೂರಿತವಾಗಿವೆ. ರೋಗಿಗಳು ಸಕಾಲಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಬಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments are closed.