ಕರ್ನಾಟಕ

ಸಂಶಯ ಪೀಡಿತ ಪತಿಯೊಬ್ಬ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

Pinterest LinkedIn Tumblr

murder

ಕಲಬುರಗಿ: ಸಂಶಯ ಪೀಡಿತ ಪತಿಯೊಬ್ಬ ತನ್ನ ಧರ್ಮ ಪತ್ನಿಯನ್ನು ಮಾರಕಾಸ್ತ್ರದಿಂದ ಬರ್ಬರ ಹತ್ಯೆಗೈದು ತಾನು ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಜಗದತ್ ವೃತ್ತದ ಬಳಿ ಇರುವ ತಿರಂದರಾಜ ಚಿತ್ರಮಂದಿರದ ಹತ್ತಿರ ನಡೆದಿದೆ.

ಏಲೆಕ್ಟ್ರಿಷನ್ ಕೆಲಸ ಮಾಡುತ್ತಿದ್ದ 30 ವರ್ಷದ ಪ್ರಭುಲಿಂಗ ಗೊಬ್ಬೂರ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಮಾಡಿ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹತ್ಯೆಗಿಡಾದ ಪತ್ನಿ ಮಹಾನಂದ ಸುಲೇಪೆಟ್ (25) ಎಂದು ಗುರುತಿಸಲಾಗಿದ್ದು, ಇಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಿತಿದ್ದಳು. ಕೊಲೆ ಹಾಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಪತ್ನಿಯ ಮೇಲಿನ ಸಂಶಯವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

Comments are closed.