ಕರ್ನಾಟಕ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಎಚ್ಚರಿಕೆಯ ಸಂದೇಶ ಎಂದ ಪರಮೇಶ್ವರ್

Pinterest LinkedIn Tumblr

G-Parameshwar

ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಎಚ್ಚರಿಕೆ ಗಂಟೆಯಾಗಿದೆ. ಸ್ಥಳೀಯ ಪಕ್ಷಗಳ ಮೇಲೆ ಜನರು ಒಲವು ತೋರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಪಂಚ ರಾಜ್ಯ ಚುನಾವಣೆಯ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ಥಳೀಯ ಪಕ್ಷಗಳು ಜನರ ಆಶಯಗಳನ್ನು ಈಡೇರಿಸುತ್ತವೆ ಎಂಬ ಕಾರಣಕ್ಕೆ ಜನ ಸ್ಥಳೀಯ ಪಕ್ಷಗಳತ್ತ ಒಲವು ತೋರಿರುವುದು ಈ ಚುನಾವಣೆಯಲ್ಲಿ ವ್ಯಕ್ತವಾಗಿದೆ ಎಂದರು.

ಈ ಚುನಾವಣಾ ಫಲಿತಾಂಶಗಳು ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದೆ. ಜನರ ಮನಸ್ಸು ಸ್ಥಳೀಯ ಪಕ್ಷಗಳತ್ತ ತಿರುಗಿದೆ ಎಂದರು.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲೂ ಎಚ್ಚರಿಕೆಯಿಂದ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಹೇಳಿದರು.

Comments are closed.