ಕರ್ನಾಟಕ

ಬೆಂಗಳೂರಿನಲ್ಲಿ ಕಳ್ಳತನ ನಡೆಸುತ್ತಿದ್ದ ಗುಜರಾತ್‌ನ ಕುಖ್ಯಾತ ಕಳ್ಳರ ಬಂಧನ; 48 ಲಕ್ಷ ರೂ.ಮೌಲ್ಯದ ವಸ್ತು ವಶ

Pinterest LinkedIn Tumblr

bang kallaru

ಬೆಂಗಳೂರು: ನಗರದಲ್ಲಿ ಕಳೆದ 10 ವರ್ಷಗಳಿಂದ ನಡೆದಿದ್ದ ಹಲವು ಕನ್ನ ಕಳವು ಕೃತ್ಯಗಳನ್ನು ಎಸಗಿದ್ದ ಗುಜರಾತ್‌ನ ಕುಖ್ಯಾತ ಕನ್ನಗಳ್ಳರ ಗ್ಯಾಂಗ್‌ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪಶ್ಚಿಮ ವಿಭಾಗದ ಪೊಲೀಸರು ಗ್ಯಾಂಗ್‌ನ ಪ್ರಮುಖ ತಲಪಾಡ್ ನವಗಾನ್ ಬಾಯ್ ಸೇರಿ ಮೂವರನ್ನು ಬಂಧಿಸಿ 48 ಲಕ್ಷ 47 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುಜರಾತ್‌ನ ಖೇಡ ಜಿಲ್ಲೆಯ ಜನಬಾಯ್‌ಮಾಳ್ವದ ತಲಪಾಡ್ ನವಗಾನ್ ಬಾಯ್ ಅಲಿಯಾಸ್ ಶಂಕರ್(೫೫)ಜೊತೆಗೆ ಆತನ ಸಹಚರರಾದ ಅಹಮದಾಬಾದ್‌ನ ರಾಜು ಅಲಿಯಾಸ್ ರಾಜೇಶ್(೩೨) ಮಿತೇಶ್ ಪಾಂಚಾಲ್(೨೨)ನನ್ನು ಬಂಧಿಸಲಾಗಿದೆ.ಗ್ಯಾಂಗ್‌ನ ಪ್ರಮುಖ ತಲಪಾಡ್ ಪತ್ನಿ ಸೇರಿ ಇನ್ನೂ ಐದಾರು ಮಂದಿ ಗ್ಯಾಂಗ್‌ನಲ್ಲಿದ್ದು ಅವರಿಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತ ಕನ್ನಗಳ್ಳರಿಂದ ೧ ಕೆ.ಜಿ ೨೫೦ ಗ್ರಾಂ ತೂಕದ ಚಿನ್ನಾಭರಣಗಳು ೧೫೦ ಕೆ.ಜಿ ಬೆಳ್ಳಿಯ ವಸ್ತುಗಳು ಹಾಗೂ ಒಂದು ಹೊಂಡಾ ಅಮೇಜ್ ಕಾರು ಸೇರಿ ೪೮ಲಕ್ಷ ೪೭ ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಕಳೆದ ೨೦೦೫ ರಿಂದ ಹೊಸಕೆರೆಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪಶ್ಚಿಮ ವಿಭಾಗ ಸೇರಿ ನಗರದ ಹಲವು ಕಡೆಗಳಲ್ಲಿ ಕನ್ನಗಳವು ಕೃತ್ಯಗಳನ್ನು ನಡೆಸಿದ್ದರು.

ಕಳವು ಮಾಡಲು ವಿಮಾನದಲ್ಲಿ ಬಂದು ಹೋಗುತ್ತಿದ್ದ ಆರೋಪಿಗಳು ಕೆಲವು ದಿನ ಹೊಸಕೆರೆಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ತಂಗಿ ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿ ಅದನ್ನು ಗುಜರಾತ್‌ನಲ್ಲಿ ಮಾರಾಟ ಮಾಡುತ್ತಿದ್ದರು.

ಕಳವು ಮಾಲುಗಳು ಹೆಚ್ಚಾದರೆ ವಿಮಾನದಲ್ಲಿನ ತಪಾಸಣೆಗೆ ಹೆದರಿ ಗುಜರಾತ್‌ನಿಂದ ಕಾರು ತರಿಸಿಕೊಂಡು ಅದರಲ್ಲಿ ಸಾಗಿಸುತ್ತಿದ್ದರು ಅಲ್ಲದೇ ನಗರದಲ್ಲಿ ಓಡಾಡಲು ಹೊಂಡಾ ಅಮೇಜ್ ಕಾರನ್ನು ಖರೀದಿಸಿದ್ದರು.

ಕನ್ನಕಳವು ಮಾಡುತ್ತಿದ್ದ ಆರೋಪಿಗಳ ಬೆರಳಚ್ಚು ಹಲವೆಡೆ ಹೋಲಿಕೆಯಾಗಿದ್ದರೂ ಎಲ್ಲೂ ಸುಳಿವು ಸಿಗದಂತೆ ನಾಪತ್ತೆಯಾಗುತ್ತಿದ್ದರು ವಿಜಯನಗರದಲ್ಲಿ ಇತ್ತೀಚಿಗೆ ನಡೆದಿದ್ದ ಕಳವು ಪ್ರಕರಣದ ಕೃತ್ಯವು ಸಿಸಿಟಿವಿ ಕ್ಯಾಮಾರದಲ್ಲಿ ದಾಖಲಾಗಿದ್ದು ಅದರಲ್ಲಿ ಆರೋಪಿ ಭಾಗಿಯಾಗಿದ್ದ ಆರೋಪಿಯನ್ನು ಖಚಿತ ಮಾಹಿತಿಯ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾ ತಲಪಾಡ್ ನವಗಾನ್ ಗ್ಯಾಂಗ್ ಪತ್ತೆಯಾಯಿತು ಎಂದು ವಿಜಯನಗರ ಎಸಿಪಿ ಎಸ್.ಕೆ.ಉಮೇಶ್ ತಿಳಿಸಿದ್ದಾರೆ.

ಬಂಧಿತ ಗ್ಯಾಂಗ್ ನಡೆಸಿರುವ ೧೩ ಕನ್ನಗಳವು ಪ್ರಕರಣಗಳು ಪತ್ತೆಯಾಗಿದೆ ಕಳವು ಮಾಡಿರುವ ಬಹಳಷ್ಟು ಚಿನ್ನಾಭರಣಗಳು ತಲಪಾಡ್ ನವಗಾನ್‌ನ ಪತ್ನಿಯ ಬಳಿಯಿದ್ದು ತಲೆಮರೆಸಿಕೊಂಡಿರುವ ಆಕೆ ಮತ್ತು ಇನ್ನಿತರ ಸಹಚರರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಹೇಳಿದರು.ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್‌ಗೌಡ ಮತ್ತವರ ಸಿಬ್ಬಂದಿ ಗ್ಯಾಂಗ್‌ನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

Comments are closed.