ದಾವಣಗೆರೆ: ಹೂವಿನಡಗಲಿ ಗ್ರಾಮದಲ್ಲಿ ಹೆಣ್ಣು ಹೆತ್ತಿದ್ದಕ್ಕೆ ಪತಿಯೊಬ್ಬ ಬಾಣಂತಿ ಪತ್ನಿಗೆ ಹಿಂಸೆ ನೀಡಿದ್ದರಿಂದ ಮನನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಶಿಲ್ಪ (28) ಮೃತ ಬಾಣಂತಿಯಾಗಿದ್ದು, ಕೆಳೆದೆರಡು ವರ್ಷಗಳ ಹಿಂದೆ ಅನುಮೇಶಿ ಎಂಬುವರೊಂದಿಗೆ ವಿವಾಹವಾಗಿದ್ದರು. ಇತ್ತೀಚೆಗೆ ಶಿಲ್ಪ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಿಟ್ಟುಗೊಂಡ ಅನುಮೇಶಿ ತಾಯಿ ಮಗುವಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಳಾಗಿದ್ದ ಬಾಣಂತಿಯನ್ನು ದಾವಣಗೆರೆ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪ ಗುರುವಾರ ಮೃತಪಟ್ಟಿದ್ದಾರೆ.
ಸದ್ಯ ಮಗಳ ಸಾವಿನ ಸಂಬಂಧ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ಪತಿಯೇ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಹೂವಿನಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Comments are closed.