ಕರ್ನಾಟಕ

ಈಜುತ್ತಿದ್ದ ಮಹಿಳೆಯರ ಫೋಟೋ ತೆಗೆದ 3 ವಿದೇಶಿಯರ ಬಂಧನ

Pinterest LinkedIn Tumblr

arrested

ಬೆಂಗಳೂರು: ಅಪಾರ್ಟ್ ಮೆಂಟ್ ವೊಂದರಲ್ಲಿರುವ ಈಜುಕೊಳದಲ್ಲಿ ಈಜುತ್ತಿದ್ದ ಮಹಿಳೆಯರ ಫೋಟೊ ಕ್ಲಿಕ್ಕಿಸಿದ ಒಮನ್ ದೇಶದ ಮೂವರು ಪ್ರಜೆಗಳನ್ನು ಭಾನುವಾರ ಬಂಧಿಸಲಾಗಿದೆ.

ಹಳೇ ಮದ್ರಾಸ್ ರಸ್ತೆಯ ಡೈಮಂಡ್ ಡಿಸ್ಟ್ರಿಕ್ಸ್ ಅಪಾರ್ಟ್ ಮೆಂಟ್ ಈಜುಕೊಳದಲ್ಲಿ ಈಜುತ್ತಿದ್ದ ಮಹಿಳೆಯರ ಫೋಟೋವನ್ನು ಒಮನ್ ದೇಶದ ಪ್ರಜೆಗಳು ಶನಿವಾರ ಸಂಜೆ ತೆಗೆದಿದ್ದಾರೆ. ಆರೋಪಿಗಳ ವಿರುದ್ಧ ಮಹಿಳೆಯರು ದೂರು ನೀಡಿದ್ದಾರೆ. ಹಳೇ ವಿಮಾನ ನಿಲ್ದಾಣದ ಪೊಲೀಸರು ಆರೋಪಿಗಳು ಬಂಧಿಸಿದ್ದಾರೆ.

ಸಲೀಂ ಸೈಫ್(30), ಈತನ ತಮ್ಮ ಅಬ್ದುಲ್ ಸಲೀಂ ಸೈಯದ್(29) ಮತ್ತು ಸಂಬಂಧಿ ಮಹಮದ್ ಖನೀಫ್ (30) ಬಂಧಿತ ಆರೋಪಿಗಳು. ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.

ಸಂಬಂಧಿಯ ಫ್ಲಾಟ್ ಗೆ ಬಂದಿದ್ದ ಸಲೀಂ ಸೈಫ್ ಮತ್ತು ಅಬ್ದುಲ್ ಅದೇ ಅಪಾರ್ಟ್ ಮೆಂಟ್ ನ ಈಜುಕೊಳದಲ್ಲಿ ಮಹಿಳೆಯರು ಈಜುತ್ತಿದ್ದರು. ಈ ದೃಶ್ಯವನ್ನು ಒಮನ್ ಪ್ರಜೆಗಳು ತಮ್ಮ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ್ದಾರೆ. ಈ ಸಂಬಂಧ ಮಹಿಳೆಯರು ಅಪಾರ್ಟ್ ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಿದ್ದಾರೆ. ಸಂಘದ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

Write A Comment