
ಹಾಸನ: ಅತ್ಯಂತ ಕಡಿಮೆ ಮಾಲಿನ್ಯ ಪ್ರಮಾಣ ಹೊಂದಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಹಾಸನ 3ನೇ ಸ್ಥಾನ ಪಡೆದುಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಜಿನಿವಾದಲ್ಲಿ ಪಟ್ಟಿ ಬಿಡುಗಡೆ ಮಾಡಿದೆ. ಡಬ್ಲುಎಚ್ಒ ವಿಶ್ವದ ಒಟ್ಟು 122 ನಗರಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿತ್ತು. ಗಾಳಿಯಲ್ಲಿರುವ ಧೂಳಿನ ಕಣಗಳ ಪ್ರಮಾಣ ಆಧರಿಸಿ ಅಧ್ಯಯನ ನಡೆಸಲಾಗಿತ್ತು.
ಈ ಪಟ್ಟಿಯಲ್ಲಿ ಕೇರಳದ ಕೊಲ್ಲಂ, ಪಾತರಂತಿಟ್ಟ ನಗರಗಳೊಂದಿಗೆ ಹಾಸನ ನಗರ ಅತ್ಯಂತ ಕಡಿಮೆ ಧೂಳಿನ ನಗರದ ಪಟ್ಟ ಉಳಿಸಿಕೊಂಡಿದೆ. ಅಧ್ಯಯನ ಪ್ರಕಾರ ಹಾಸನ ನಗರ ಪ್ರತಿ ಕ್ಯೂಬಿಕ್ ಮೀಟರ್ ಗಾಳಿಯಲ್ಲಿ ಕೇವಲ 36 ಮೈಕ್ರೋ ಗ್ರಾಂ ಧೂಳಿನ ಕಣಗಳನ್ನು ಹೊಂದಿದೆ.