ರಾಷ್ಟ್ರೀಯ

ವರದಕ್ಷಿಣೆ ಕಿರುಕುಳ: ಪತ್ನಿಯ ಮೇಲೆ ಬಿಸಿ ನೀರು ಎರಚಿದ ಪತಿ

Pinterest LinkedIn Tumblr

harassi

ಕೊಲ್ಕತ್ತಾ: ವರದಕ್ಷಿಣೆ ಕಿರುಕುಳ ನೀಡಿ 21ರ ಹರೆಯದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಮತ್ತು ಅತ್ತೆ ಬಿಸಿ ನೀರು ಎರಚಿದ ಘಟನೆ ಶುಕ್ರವಾರ ಮಾಲ್ಡಾದಲ್ಲಿ ನಡೆದಿದೆ.

ರೆಹಾನಾ ಬೀವಿ ಎಂಬಾಕೆಗೆ ಆಕೆಯ ಪತಿ ಆಜಾದ್ ಶೇಖ್ ಈ ರೀತಿಯ ಕಿರುಕುಳ ನೀಡಿದ್ದಾನೆ. ರು. 50,000 ನಗದು ಹಣವನ್ನು ವರದಕ್ಷಿಣೆ ತರುವಂತೆ ಶೇಖ್ ರೆಹಾನಳನ್ನು ಪೀಡಿಸುತ್ತಿದ್ದು, ಹಣ ಹೊಂದಿಸಲಾಗದೇ ಸೋತ ರೆಹಾನಾಳ ಮೇಲೆ ಕುದಿಯುತ್ತಿರುವ ನೀರನ್ನು ಎರಚಿದ್ದಾನೆ.

ರೆಹನಾ ದೇಹದಲ್ಲಿ ಶೇ. 70 ರಷ್ಟು ಸುಟ್ಟಗಾಯಗಳಾಗಿದ್ದು, ಈಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ರೆಹಾನಾಳಿಗೆ ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಮದುವೆಯ ವೇಳೆ ರು. 15,000 ನಗದು, ಚಿನ್ನ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಗಿತ್ತು. ಮದುವೆಯ ನಂತರವೂ ಇನ್ನಷ್ಟು ವರದಕ್ಷಿಣೆ ತರುವಂತೆ ರೆಹಾನಾಳಿಗೆ ಒತ್ತಾಯಿಸುತ್ತಿದ್ದರೆಂದು ರೆಹಾನಾಳ ಕುಟುಂಬ ಹೇಳಿದೆ.

ಐದು ವರ್ಷಗಳ ಹಿಂದೆ ರೆಹಾನಾ ಮತ್ತು ಆಜಾದ್‌ರ ಮದುವೆಯಾಗಿದ್ದು, ಈ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿದ್ದಾರೆ.

Write A Comment