ರಾಷ್ಟ್ರೀಯ

ಯುಪಿಎಸ್ ಸಿ ಪಾಸಾದ ಚಿತ್ತೂರಿ ರಾಮಕೃಷ್ಣರ ಸಾಧನೆಯನ್ನೊಮ್ಮೆ ನೋಡಿ…

Pinterest LinkedIn Tumblr

Chitturi Ramakrishna

ಹೈದರಾಬಾದ್: ಇತ್ತೀಚೆಗೆ ಪ್ರಕಟವಾದ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶದಲ್ಲಿ ಚಿತ್ತೂರಿ ರಾಮಕೃಷ್ಣ 84 ನೇ ರ್ಯಾಂಕ್ ಪಡೆದಿದ್ದು ಶೀಘ್ರವೇ ಐಎಎಸ್ (ಭಾರತೀಯ ಆಡಳಿತ ಸೇವೆ) ಗೆ ಸೇರಲಿದ್ದಾರೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ 84 ನೇ ರ್ಯಾಂಕ್ ಪಡೆದಿರುವ ರಾಮಕೃಷ್ಣ ಈಗಾಗಲೇ ಪಶ್ಚಿಮ ಬಂಗಾಳ ಕೇಡರ್ ನ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಭಾರತೀಯ ಕಂದಾಯ ಸೇವೆಯಲ್ಲಿ ತರಬೇತಿ ಪಡೆಯಲು ಪೊಲೀಸ್ ಇಲಾಖೆಯಿಂದ ಬೀಳ್ಕೊಡುಗೆಗಾಗಿ ಎದುರು ನೋಡುತ್ತಿದ್ದಾರೆ.

ರಾಮಕೃಷ್ಣ ಅವರ ತಂದೆ ರೈಲ್ವೆ ಇಲಾಖೆಯ ಇಂಜಿನಿಯರ್ ಚಿತ್ತೂರಿ ಎ ಪ್ರಸಾದ್. ಐಪಿಎಸ್ ಪರೀಕ್ಷೆ ಬರೆಯುವುದಕ್ಕೂ ಮುನ್ನ 2004 ರಲ್ಲಿ ರಾಮಕೃಷ್ಣ ರೈಲ್ವೆಯಲ್ಲಿ ವಾಣಿಜ್ಯ ವಿಭಾಗದ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ 2007 ರಲ್ಲಿ ಕ್ಯಾಟ್ (ಸಾಮಾನ್ಯ ಪ್ರವೇಶ ಪರೀಕ್ಷೆ) ಬರೆದು ಅಹಮದಾಬಾದ್ ನ ಐಐಎಂ ಸೇರಿ ಲಂಡನ್ ನ ಕಂಪನಿಯಲ್ಲಿ ಇಂಟರ್ನಶಿಪ್ ಮುಗಿಸಿದ್ದರು. ಐಪಿಎಸ್ ನಿಂದ ಐಎಎಸ್ ವರೆಗಿನ ಹಾದಿಯ ಬಗ್ಗೆ ಮಾತನಾಡಿರುವ ರಾಮಕೃಷ್ಣ, ಕಾರ್ಪೊರೇಟ್ ವಲಯದ ಕೆಲಸಗಳಲ್ಲಿ ಸಂತಸದಿಂದ ಇದ್ದೆ. ಆದರೆ ಐಎಎಸ್ ನನ್ನ ವೃತ್ತಿ ಜೀವನದ ಸೂಕ್ತ ಆಯ್ಕೆ ಎಂದೆನಿಸತೊಡಗಿತು. ಆದ್ದರಿಂದ ಐಎಎಸ್ ನ್ನು ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.

ಯಾವುದೇ ತರಬೇತಿ ಇಲ್ಲದೇ ಸಂದರ್ಶನ ಪ್ರಕ್ರಿಯೆ ವರೆಗೂ ತಲುಪಿರುವ ರಾಮಕೃಷ್ಣ, “ಕಾರ್ಯನಿರ್ವಹಣೆಯಲ್ಲಿ ವಿವಿಧತೆಯನ್ನು ಹೊಂದಿರುವುದರಿಂದ ಐಎಎಸ್ ನನಗೆ ಆಸಕ್ತಿದಾಯಕವಾಗಿತ್ತು, ನನ್ನ ಎಲ್ಲಾ ನಿರ್ಧಾರಗಳನ್ನು ತಂದೆ ತಾಯಿ ಒಪ್ಪಲಿಲ್ಲವಾದರೂ ನನ್ನ ಮೇಲೆ ನಂಬಿಕೆ ಹೊಂದಿದ್ದರು. ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಿರಲಿಲ್ಲ ಎಂದು ಹೇಳಿದ್ದಾರೆ.

Write A Comment