ಕರ್ನಾಟಕ

ಪ್ರೋ ಕಬಡ್ಡಿ: 53 ಲಕ್ಷಕ್ಕೆ ಬೆಂಗಳೂರು ಬುಲ್ಸ್ ಗೆ ಬಿಕರಿಯಾದ ಮೋಹಿತ್ ಚಿಲ್ಲರ್

Pinterest LinkedIn Tumblr

Mohit Chhillar

ಮುಂಬೈ: 4ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ದುಬಾರಿ ಮೊತ್ತ 53 ಲಕ್ಷ ರು.ಗೆ ಬಿಡ್ ಆಗಿ ಮೋಹಿತ್ ಚಿಲ್ಲರ್ ಬೆಂಗಳೂರು ಬುಲ್ಸ್ ತಂಡ ಸೇರಿದ್ದಾರೆ.

ಪ್ರೋ ಕಬಡ್ಡಿ ಇತಿಹಾಸದಲ್ಲೇ ಇಷ್ಟೋಂದು ದೊಡ್ಡ ಮೊತ್ತಕೆ ಮಾರಾಟವಾದ ಮೊದಲ ಆಟಗಾರ ಎಂಬ ಖ್ಯಾತಿಗೆ ಮೋಹಿತ್ ಚಿಲ್ಲರ್ ಭಾಜನರಾಗಿದ್ದಾರೆ. ಇನ್ನು ಸಂದೀಪ್ ನರ್ವಾಲ್ ಅವರನ್ನು 45.5 ಲಕ್ಷ ರುಪಾಯಿಗೆ ತೆಲುಗು ಟೈಟಾನ್ಸ್ ಖರೀದಿಸಿದೆ. ಹಾರಾಜಿನಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಏಕೈಕ ಆಟಗಾರ ಮೊಹಮ್ಮದ್ ರಿಜ್ವಾನ್ ರನ್ನು ತೆಲುಗು ಟೈಟಾನ್ಸ್ ತಂಡ ಖರೀದಿಸಿದೆ.

ಜಸ್ಮೀರ್ ಸಿಂಗ್ ಗುಲಿಯಾ 35 ಲಕ್ಷ (ತೆಲುಗು ಟೈಟಾನ್ಸ್), ಕುಲದೀಪ್ ಸಿಂಗ್ 30.4 ಲಕ್ಷ(ಪಾಟ್ನಾ ಪೈರೇಟ್ಸ್), ಸುರೇಂದ್ರ ನಾಡಾ 30 ಲಕ್ಷ(ಬೆಂಗಳೂರು ಬುಲ್ಸ್), ಧರ್ಮರಾಜ್ 29 ಲಕ್ಷ(ಪಾಟ್ನಾ ಪೈರೇಟ್ಸ್), ರಾಕೇಶ್ ಕುಮಾರು 26 ಲಕ್ಷ(ಯು ಮುಂಬೈ), ಬಾಜಿರಾವ್ 20 ಲಕ್ಷ(ಪಾಟ್ನಾ ಪೈರೇಟ್ಸ್) ಅಜಯ್ ಠಾಕೂರ್ 19 ಲಕ್ಷ(ಪುನೇರಿ ಪಲ್ಟಾನ್ಸ್).

ಬೆಂಗಳೂರು ಬುಲ್ಸ್ ತಂಡದ ಆಟಗಾರರು
ಆಲ್ ರೌಂಡರ್: ಸಂಜಯ್ ಶ್ರೇಷ್ಠಾ,
ರೈಡರ್ಸ್: ಸಿನೋಥರನ್ ಕಾನೇಜ್ ರಾಜ, ಪವನ್ ಕುಮಾರ್, ದೀಪಕ್ ಕುಮಾರ್ ದಹಿಯಾ, ಅಮಿತ್ ರಾಥಿ, ಯೋಗೇಶ್ ಹೂಡಾ, ರೋಹಿತ್ ಬಲಿಯಾನ್, ರಾಹುಲ್ ಕುಮಾರ್
ಡಿಫೆಂಡರ್ಸ್: ಮೋಹಿತ್ ಚಿಲ್ಲರ್, ಸುರೇಂದರ್ ನಡ್ಡಾ, ಮನೋಜ್ ಕುಮಾರ್, ಜೀವಾ ಗೋಪಾಲ್, ರವೀಂದರ್ ಕುಮಾರ್, ನಿಕೋಲಸ್ ಜಾರ್ಜ್ ಮೊಟ್ರಾಮ್

Write A Comment