ಕರ್ನಾಟಕ

ನಾನೂ ಬ್ರಾಹ್ಮಣ, ನನಗೂ ವಿದ್ಯಾರ್ಥಿ ವೇತನ ನೀಡಿ

Pinterest LinkedIn Tumblr

braಬೆಂಗಳೂರು: ರಾಜ್ಯ ಸರಕಾರಕ್ಕೆ ೩ ವರ್ಷ ತುಂಬಿದ ಅಂಗವಾಗಿ ಶುಕ್ರವಾರ ಜಿಕೆವಿಕೆ ಆವರಣದ ಡಾ.ಬಾಬುರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಬೇಡಿಕೆಗಳ ಸುರಿಮಳೆಯೇ ಕೇಳಿಬಂತು.

ಎಲ್ಲಾ ಜಿಲ್ಲೆಗಳಿಂದ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಆರಿಸಿ ಕರೆತರಲಾಗಿತ್ತು. ಹೆಚ್ಚಿನವರು ಸರಕಾರವನ್ನು ಶ್ಲಾಘನೆ ಮಾಡಿದರು. ಈ ವೇಳೆ ಕೃಷಿ ಹೊಂಡ ಮಾಡಿದರೂ ಮಳೆ ಬರದೆ ವ್ಯರ್ಥವಾಗಿದ್ದು, ಸರಕಾರಿ ಶಾಲೆಗಳಿಗೆ ಬಿಸಿಯೂಟದ ಜತೆ ನೆನೆಹಾಕಿದ ಧಾನ್ಯ ಕೂಡಾ ನೀಡಿ ಬೇಕು. ವಿದ್ಯಾಸಿರಿ ಯೋಜನೆಯ ಹಣವನ್ನು ಪ್ರತಿ ತಿಂಗಳು ನೀಡಿ. ಯೋಜನೆ ಜನರನ್ನು ಮುಟ್ಟುತ್ತಿದೆಯೋ ಎಂದು ಸರಿಯಾಗಿ ನೋಡಿ ಎಂಬಿತ್ಯಾದಿ ಸಲಹೆಎಗಳೂ ಕೂಡ ಕೇಳಿ ಬಂದಿದೆ

ಈ ವೇಳೆ ಸಭೆ ಮಧ್ಯದಿಂದಲೇ ಮಾತನಾಡಿದ ಬಾಲಕನೊಬ್ಬ ಎಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನ ನೀಡ್ತೀರಿ. ನಾನೊಬ್ಬ ಬಡ ಬ್ರಾಹ್ಮಣ. ನನಗೂ ವಿದ್ಯಾರ್ಥಿವೇತನ ನೀಡಿ ಎಂದು ಒತ್ತಾಯಿಸಿದ ಘಟನೆ ನಡೆದಿದೆ.

ವಿದ್ಯಾರ್ಥಿ ಹರ್ಷಿತ್ ಎಂಬಾತ ಎಸ್ ಸಿ ಎಸ್ ಟಿ ವರ್ಗಕ್ಕೆ ನೀಡುವಂತೆ ನಮಗೂ ನೀಡಬೇಕು, ಶ್ರೀಮಂತರ ಮಕ್ಕಳು ವಿದೇಶಕ್ಕೆ ಹೋಗುತ್ತಾರೆ. ನಾವು ನಮ್ಮ ದೇಶವನ್ನೇ ಉದ್ಧಾರ ಮಾಡುತ್ತೇವೆ. ಮೊನ್ನೆ ಪೇಪರ್ ಲೀಕ್ ಆದಾಗ ಅದನ್ನು ಪಡೆದು ಪರೀಕ್ಷೆ ಬರೆದಿದ್ದು ಎಲ್ಲರೂ ಶ್ರೀಮಂತರ ಮಕ್ಕಳೇ ಹೊರತು ಬ್ರಾಹ್ಮಣರಲ್ಲ, ಹೀಗಾಗಿ ನಮಗೂ ವಿದ್ಯಾರ್ಥಿ ವೇತನದಂತಹ ಯೋಜನೆಗಳನ್ನನು ರೂಪಿಸಿ ಎಂದು ಆಗ್ರಹಿಸಿದ್ದಾನೆ

ಇದೇ ವೇಳೇ ದೇಶದಲ್ಲೇ ಭಾರಿ ಚರ್ಚೆಯಾಗಿದ್ದ ಭಾರತ್ ಮಾತಾಕೀ ಜೈ ಘೋಷಣೆ ಪರವಾಗಿ ಬ್ಯಾಟಿಂಗ್ ಮಾಡಿದ್ದ ಸಚಿವ ರೋಚನ್ ಬೇಗ್ ಈ ಹಿಂದೆ – ಭಾರತ್ ಮಾತಾ ಕೀ ಜೈ ಎಂದು ಎಷ್ಟು ಬಾರಿಯಾದರೂ ಹೇಳುತ್ತೇನೆ ಎಂದಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಲು ಆರಂಭಿಸುವಾಗ ಬೋಲೋ ಭಾರತ್ ಮಾತಾಡಿ ಕೀ ಜೈ ಎಂದು ಘೋಷಣೆ ಕೂಗಿದರು.
ರಾಜ್ಯದಲ್ಲಿ ಬರ ಆದರೆ ಮೂರು ವರ್ಷ ಆಚರಣೆಗೆ ಅದ್ದೂರಿ ಸಮಾರಂಭ

ಬರ ಹಿನ್ನೆಲೆಯಲ್ಲಿ ಈ ವರ್ಷ ಅದ್ದೂರಿ ಆಚರಣೆ ಮಾಡಬಾರದು ಎಂಬ ಸೂಚನೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಜಿಕೆವಿಕೆಯಲ್ಲಿ ನಡೆದ ಸಮಾರಂಭ ಇದನ್ನು ಸುಳ್ಳು ಎಂದು ತೋರಿಸಿಕೊಟ್ಟಿತು. ಏಕೆಂದರೆ ಸಮಾವೇಶ ಭವನದ ಬೃಹತ್ ವೇದಿಕೆಗೆ ಬೃಹತ್ ಪರದೆ ಅಳವಡಿಸಲಾಗಿತ್ತು. ವಿವಿಧ ಸಾಂಸ್ಕೃತಿಕ ತಂಡಗಳು ನೃತ್ಯ ಪ್ರದರ್ಶನ ಮಾಡಿದವು. ಮೊದಲಿಗೆ ಕನ್ನಡ, ಬರಗಾಲ, ಮಳೆಗೆ ಸಂಬಂಧಿಸಿದ ನೃತ್ಯ ಹಾಗೂ ಗೀತೆಗಳ ಪ್ರದರ್ಶನ ನಡೆಯಿತು. ನಂತರ ಸರಕಾರದ ಪ್ರತಿ ಕೆಲಸಗಳನ್ನು ಸಮರ್ಥನೆ ಮಾಡುವ ಹಾಡುಗಳ ಪ್ರದರ್ಶನವಾಯಿತು. ಮುಂಭಾಗದಲ್ಲಿ ಡೊಳ್ಳು ಕುಣಿತ ಮೂಲಕ ಬಂದವರಿಗೆ ಸ್ವಾಗತ ಕೋರಲಾಯಿತು. ಒಟ್ಟಿನಲ್ಲಿ ಕಡಿಮೆ ವೆಚ್ಷದಲ್ಲಿ ಮಾಡಿದ ಸಮಾರಂಭ ಎನ್ನುವ ಯಾವುದೇ ಕುರುಹು ಕಂಡುಬರಲಿಲ್ಲ. ‘ನುಡಿದಂತೆ ನಡೆದಿದ್ದೇವೆ ‘ ಎಂಬ ಮಾತು ಸಂಭ್ರಮಾಚರಣೆಯಲ್ಲೇ ಸುಳ್ಳಾಯಿತು.

Write A Comment