ಕರ್ನಾಟಕ

ಉಡ ಮತ್ತು ಕಾಡುಕುರಿಗಳ ಚರ್ಮ ಹಾಗೂ ಮಾಂಸ ವಶ : ಇಬ್ಬರು ಬೇಟೆಗಾರರ ಬಂಧನ

Pinterest LinkedIn Tumblr

udaಕನಕಪುರ, ಮೇ 13- ಅಭಯಾರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸಿ ಕಾಡುಕುರಿ ಮತ್ತು ಉಡಗಳನ್ನು ಬೇಟೆಯಾಡಿ ಚರ್ಮ ಸುಲಿದು ಮಾಂಸ ಕದ್ದೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಹಲಗೂರು ವಲಯ ಅರಣ್ಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಂಧಿಸಿ ಪ್ರಾಣಿಗಳ ಚರ್ಮ ಮತ್ತು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಹಲಗೂರು ಸಮೀಪದ ಮುಸರೇದೊಡ್ಡಿ ಗ್ರಾಮದ ಮಹದೇವ್ ಮತ್ತು ನಿರಂಜನ್ ಬಂಧಿತರು. ಕಾವೇರಿ ವನ್ಯಜೀವಿ ವಲಯದ ಬಸವನಬೆಟ್ಟ ಅಭಯಾರಣ್ಯದ ಅರೇಕಲ್ಲು ಬೀಟ್ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದಲ್ಲದೆ, ಅಲ್ಲಿನ ಕಾಡುಪ್ರಾಣಿಗಳನ್ನು ಕೊಂದು ಅವುಗಳ ಚರ್ಮ ಮತ್ತು ಮಾಂಸವನ್ನು ಕದಿಯಲು ಯತ್ನಿಸುತ್ತಿದ್ದ ವೇಳೆ ರೋಪಿಗಳನ್ನು ಬಂಧಿಸಲಾಗಿದೆ.

ಹಲಗೂರು ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತವರ ಸಿಬ್ಬಂದಿಗಳು ಗಸ್ತು ತಿರುಗುವ ಸಂದರ್ಭದಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಅಧಿಕಾರಿಗಳು ಮುಂದಿನ ಕ್ರಮಕೈಗೊಂಡಿದ್ದಾರೆ.

Write A Comment