ಮನೋರಂಜನೆ

ಲಿಪ್ ಲಾಕ್ ಗೆ ಮಾಡೋಕೆ ರೆಡಿ ಎಂದ ಹಾಟ್ ಸನ್ನಿ

Pinterest LinkedIn Tumblr

Sunny-e1463141000631ಪಡ್ಡೆಗಳ ಸ್ವಪ್ನ ಕನ್ನಿಕೆಯಾದ ಸನ್ನಿ ಲಿಯೋನ್ ಇತ್ತೀಚಿಗೆ ಯಾವ ಚಿತ್ರಗಳಲ್ಲಿಯೂ ಲಿಪ್ ಲಾಕ್ ಮಾಡದೇ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಅಲ್ಲದೇ ಇನ್ನೂ ಮುಂದೆ ಸನ್ನಿ ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಮಾತುಗಳು ಬಿಟೌನ್ ಗಲ್ಲಿಯಲ್ಲಿ ಹರಿದಾಡಿತ್ತು. ಅದರೆ ಈ ಗಾಳಿ ಸುದ್ದಿಗಳಿಗೆ ಸ್ವತಃ ಸನ್ನಿ ಬ್ರೇಕ್ ಹಾಕಿದ್ದಾರೆ.

ಹೌದು, ತಾನು ಲಿಪ್ ಲಾಕ್ ಸೀನ್ ಮಾಡೋಕೆ ರೆಡಿ ಇದ್ದೀನಿ ಅಂತಾ ತಮ್ಮ ಹುಟ್ಟು ಹಬ್ಬದ ದಿನವೇ ಗಂಡನೊಂದಿಗೆ ಲಿಪ್ ಲಾಕ್ ಮಾಡಿರುವ ಸನ್ನಿ, ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ ‘ನಾನು ಕ್ಯಾಮಾರಾ ಮುಂದೆ ಕಿಸ್ ಮಾಡಲ್ಲಾಂತ ಯಾರು ಹೇಳಿದ್ದು? ಎಂಬ ಅಡಿ ಬರಹ ನೀಡಿದ್ದಾರೆ.

‘ಜಿಸ್ಮ್-2’ ಚಿತ್ರದ ಮೂಲಕ ಬಿ ಟೌನ್ ಕದತಟ್ಟಿದ ಸನ್ನಿ, ತನ್ನ ಮೈಮಾಟದಿಂದಲೇ ಚಿತ್ರವನ್ನ ಗೆಲ್ಲಿಸಿಬಿಟ್ಟಳು. ನಂತರ ಬಂದ ‘ರಾಗಿಣಿ ಎಂಎಂಎಸ್-2’ ಚಿತ್ರದಲ್ಲೂ ಸನ್ನಿ ಕಿಸ್ಸಿಂಗ್ ಹಾಗೂ ಯ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಳು. ಅದರ ಬಳಿಕ ಬಂದ ‘ಏಕ್ ಪಹೇಲಿ ಲೀಲಾ’, ‘ಕುಚ್ ಕುಚ್ ಲೋಚಾ ಹೇ’, ‘ಮಸ್ತಿಜಾದೆ’, ‘ಒನ್ ನೈಟ್ ಸ್ಟ್ಯಾಂಡ್’ ಸಿನಿಮಾಗಳಲ್ಲಿ ಸನ್ನಿ ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಪರಿಣಾಮ ಆಕೆಯ ಸಿನಿಮಾಗಳು ಒಂದರ ಹಿಂದೆ ಒಂದು ಮಕಾಡೆ ಮಲಗಿದ್ದವು.

Write A Comment