ಕರ್ನಾಟಕ

ವಿಮೆ ವಿಶಾಲಾಕ್ಷಿಯ ಪತಿ ಶ್ರೀಕಾಂತ್ ಬಂಧನ

Pinterest LinkedIn Tumblr

Vishalakshi-husband-arrest

ಬೆಂಗಳೂರು,ಮೇ.೧೨-ಹೆಚ್‌ಡಿಎಫ್‌ಸಿ ಲೈಫ್ ಇನ್ಸೂರೆನ್ಸ್‌ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲಾಕ್ಷಿ ಭಟ್ ಅವರ ಪತಿ ಶ್ರೀಕಾಂತ್ ಹೆಗ್ಡೆ ಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿ ತಲೆಮರೆಸಿಕೊಂಡಿದ್ದ ಶ್ರೀಕಾಂತ್ ಹೆಗ್ಡೆ(೪೭)ಯನ್ನು ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಶರತ್‌ಚಂದ್ರ ಅವರು ತಿಳಿಸಿದ್ದಾರೆ.

ಆರೋಪಿಯು ಪತ್ನಿ ವಿಶಾಲಾಕ್ಷಿಗೆ ವಂಚನೆ ಮಾಡಲು ಕುಮ್ಮಕ್ಕು ನೀಡುತ್ತಿದ್ದನು.ವಿಶಾಲಾಕ್ಷಿ ಬಂಧನದ ನಂತರ ಆರೋಪಿಯು ತಲೆ ಮರೆಸಿಕೊಂಡಿದ್ದನು.ಟೈಟಾನ್ ಇಂಡಸ್ಟ್ರೀಯಲ್‌ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂಧಿತ ಶ್ರೀಕಾಂತ್ ವಿಶಾಲಾಕ್ಷಿ ತಮ್ಮ ಪತಿ ಹೆಸರಿನಲ್ಲಿ ಖಾತೆಯೊಂದನ್ನು ತೆರೆದಿದ್ದರು. ಅಲ್ಲದೆ ವಂಚಿಸಿದ ಹಣವನ್ನು ಶ್ರೀಕಾಂತ್ ಹೆಸರಿನಲ್ಲಿ ತೆಗೆದಿದ್ದ ಖಾತೆಗೆ ವರ್ಗಾಯಿಸುತ್ತಿದ್ದರು.

ಗ್ರಾಹಕರಿಂದ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಹಣದಿಂದ ಜಮೀನು ನಿವೇಶನ ಖರೀದಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ.ಹಣ ವರ್ಗಾವಣೆ ಕುರಿತು ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿ ಶ್ರೀಕಾಂತ್‌ನನ್ನು ಬಂಧಿಸಿದ್ದಾರೆ.

Write A Comment