ಕರ್ನಾಟಕ

ಈ ತಿಂಗಳೇ ಸಂಪುಟಕ್ಕೆ ಸರ್ಜರಿ-ಸಚಿವರಿಗೆ ಎದೆಬಡಿತ ಶುರು

Pinterest LinkedIn Tumblr

sidduಮೈಸೂರು, ಮೇ.9- ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ಪುನಾರಚನೆಯನ್ನು ಈ ತಿಂಗಳೊಳಗೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಳಿಗ್ಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಸಂಪುಟ ಪುನಾರಚನೆ ಮಾಡಬೇಕೆಂದು ಹಲವು ಮಂದಿ ಸಚಿವರು ಒತ್ತಾಯಿಸುತ್ತಿದ್ದರು. ಆದರೆ ಅದಕ್ಕೆ ಸೂಕ್ತವಾದ ಕಾಲ ಕೂಡಿಬಂದಿರಲಿಲ್ಲ. ಈಗ
ಆ ಕಾಲ ಕೂಡಿಬಂದಿದೆ. ಕೆಲವರನ್ನು ಇಟ್ಟುಕೊಂಡು ಕೆಲವರನ್ನು ಕೈಬಿಡಲಾಗುವುದು. ಪುನಾರಚನೆಗೆ ಯಾವುದೇ ಮಾನದಂಡವಿಲ್ಲ. ಹೊಸಬರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಧಿಕಾರಕ್ಕೆ ಬಂದು ಮೇ.೧೩ಕ್ಕೆ ೩ ವರ್ಷ ಕಳೆಯುತ್ತಿದೆ. ಈ ಮೂರು ವರ್ಷದ ಆಡಳಿತ ತೃಪ್ತಿ ತಂದಿದೆ. ಏಕೆಂದರೆ ನಾವು ನುಡಿದಂತೆ ನಡೆದಿದ್ದು ಪಾರದರ್ಶಕ ಆಡಳಿತ ನೀಡಿದ್ದೇವೆ. ನಮ್ಮ ಸರ್ಕಾರ ಯಾವ ಹಗರಣಗಳಲ್ಲೂ ಸಿಲುಕಿಲ್ಲ. ರಾಜಕೀಯವಾಗಿ ಆರೋಪಗಳನ್ನು ಮಾಡಿದ್ದಾರೆ. ನಾವು ಪ್ರಣಾಳಿಕೆಯಲ್ಲಿ ೧೬೦ ಭರವಸೆಗಳನ್ನು ನೀಡಿದ್ದೆವು. ಅದರಲ್ಲಿ ೧೨೦ ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆ ಸೇರಿದಂತೆ ಇನ್ನೂ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದ್ಯದಲ್ಲೇ ಈಡೇರಿಸಲ್ಲಿದ್ದೇವೆ ಎಂದರು.
ಪ್ರಧಾನಿಗಳು ಕರೆದಿದ್ದ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗಿ ೧೨,೨೭೨ ಕೋಟಿ ರೂ. ಗಳ ಬೇಡಿಕೆಯನ್ನು ಕರ್ನಾಟಕ ರಾಜ್ಯಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಇಂಗಾರು ಪರಿಹಾರದ ಹಣ ರೂ. ೭೨೩ ಕೋಟಿಯನ್ನು ವಾರದೊಳಗೆ ಕೊಡಿಸುವುದಾಗಿ ಪ್ರಧಾನಿ ಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಮೇ ೧೧ ರಂದು ಲೋಕಸಭಾ ಸದಸ್ಯರು ಹಾಗೂ ಕೇಂದ್ರದ ರಾಜ್ಯ ಸಚಿವರುಗಳ ಜೊತೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯಕ್ಕೆ ಬೇಕಾಗುವ ಸೌಲಭ್ಯಗಳನ್ನು ಕೇಂದ್ರದಿಂದ ಪಡೆಯಲು ಸಲಹೆ ಸೂಚನೆಗಳನ್ನು ನೀಡಲಾಗುವುದು.
ಮೇ ೧೩ ರಂದು ಬೆಂಗಳೂರಿನಲ್ಲಿ ಸರ್ಕಾರ ಮೂರು ವರ್ಷ ಆಡಳಿತ ಮಾಡಿದ ನೆನಪಿಗಾಗಿ ಜನಮನ ಕಾರ್ಯಕ್ರಮವನ್ನು ನಡೆಸಲಾಗುವುದು. ಮೇ ೧೪ ರಂದು ಮೂರು ವರ್ಷಗಳ ಸರ್ಕಾರದ ಸಾಧನೆಗಳ ಪುಸ್ತಕ ಬಿಡುಗಡೆ ಮಾಡಲಾಗುವುದು.
ರಾಜ್ಯ ಮಹದಾಯಿ ವಿಚಾರವಾಗಿ ಪ್ರಧಾನಿಗಳ ಜೊತೆ ಮಾತನಾಡಿ ನೀವು ಮಧ್ಯಸ್ಥಿಕೆಯ ವಹಿಸಿ ಸಭೆ ನಡೆಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಅಲ್ಲದೆ ಈ ವಿಚಾರವನ್ನು ವಿಧಾನ ಸಭೆಯಲ್ಲಿ ನಿರ್ಣಯ ಮಾಡಿದೆ ಹಾಗೂ ಪತ್ರದ ಮೂಲಕವು ಪ್ರಧಾನಿಗಳಿಗೆ ಮನವಿ ಮಾಡಿದ್ದೇವೆ. ಪರಸ್ಪರ ಮಾತುಕತೆಗೆ ನಾವು ಎಂದು ವಿರೋಧ ಮಾಡಿಲ್ಲ.ಎಂದು ಹೇಳಿದರು.
ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರ ಅವಧಿಯನ್ನು ಹೈಕಮಾಂಡ್ ಸೂಚನೆ ಮೇರೆಗೆ ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರದ ರಕ್ಷಣಾ ಸಚಿವರು ಹೊಟ್ಟೆ ಅಂಡ್ ರನ್ ಅಂತೆ ಮಾತನಾಡಬಾರದು. ಯಾರು ಅಗಸ್ಟ ಹಗರಣದಲ್ಲಿ ಇದ್ದಾರೊ ನೇರವಾಗಿ ಹೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Write A Comment