ಕರ್ನಾಟಕ

ಆರ್‌ಸಿಬಿ ತಂಡದ ನಾಯಕ ಕೊಹ್ಲಿಗೆ ನಿಷೇಧದ ಭೀತಿ..! ಮಾಡಿರುವ ಅಂಥ ತಪ್ಪಾದರೂ ಏನು..?

Pinterest LinkedIn Tumblr

virat-kohli

ಬೆಂಗಳೂರು: ಪ್ರಸಕ್ತ ಐಪಿಎಲ್ 9ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಒಂದು ಪಂದ್ಯದಿಂದ ಬ್ಯಾನ್ ಆಗುವ ಸುಳಿಗೆ ಸಿಲುಕಿದ್ದಾರೆ. ಐಪಿಎಲ್‌ನ 9ರಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿರುವ ಸ್ಟೈಲಿಷ್ ಬ್ಯಾಟ್ಸ್‌ಮನ್ ವಿರಾಟ್ (433 ರನ್)ಗಳನ್ನು ಗಳಿಸಿದ್ದರು ತಂಡದ ಇತರ ಆಟಗಾರರು ಮಾಡಿದ ತಪ್ಪಿನಿಂದ ಕೊಹ್ಲಿ ದಂಡ ತೆತ್ತಬೇಕಾಗಿದೆ. ಈಗಾಗಲೇ ನವದೆಹಲಿಯಲ್ಲಿ ಏಪ್ರಿಲ್ 22 ರಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಪುಣೆ ಜೈಂಟ್ಸ್ ತಂಡದ ವಿರುದ್ಧ ನಿಧಾನಗತಿಯ ಬೌಲಿಂಗ್‌ನಿಂದ 12 ಲಕ್ಷ ರೂ.ಗಳ ದಂಡವನ್ನು ತೆತ್ತಿದ್ದರೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ತೋರಿದ ಉದ್ರೇಕತೆಯಿಂದ ಮತ್ತೆ 24 ಲಕ್ಷ ರೂ.ಗಳ ಪೆನಾಲ್ಟಿ ವಿರಾಟ್ ಕೊಹ್ಲಿಗೆ ಬಿದ್ದಿದೆ.

ಐಪಿಎಲ್ ನಿಯಮದ ಪ್ರಕಾರ ಒಂದು ಸರಣಿಯ 3 ಪಂದ್ಯದಲ್ಲಿ ತಪ್ಪೆಗಿಸಿದರೆ ಆ ತಂಡ ನಾಯಕನಿಗೆ 30 ಲಕ್ಷ ದಂಡ ವಿಧಿಸುವುದೇ ಅಲ್ಲದೆ ಒಂದು ಪಂದ್ಯದಿಂದ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಇಂತಹ ಒತ್ತಡದಲ್ಲಿ ವಿರಾಟ್ ಕೊಹ್ಲಿ ಸಿಲುಕಿದ್ದಾರೆ. ನಾಳೆ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಪುಣೆ ಜೈಂಟ್ಸ್ ವಿರುದ್ಧ ಮತ್ತೆ ನಿಧಾನಗತಿಯ ಬೌಲಿಂಗ್ ಮಾಡಿದರೆ ಕೊಹ್ಲಿ ಮತ್ತೆ ದಂಡ ಕಟ್ಟುವ ಭೀತಿಗೆ ಒಳಗಾಗಬೇಕಾಗುತ್ತದೆ. ಒಂದು ವೇಳೆ ಕೊಹ್ಲಿಗೆ ಪೆನಾಲ್ಟಿ ಬಿದ್ದರೆ ಐಪಿಎಲ್9ರಲ್ಲಿ ಒಟ್ಟಾರೆ 66 ಲಕ್ಷ ರೂ.ಗಳ ದಂಡವನ್ನು ಕಟ್ಟಿದ ಮೊದಲ ನಾಯಕನಾಗಿಯೂ ಗುರುತಿಸಿಕೊಳ್ಳಲಿದ್ದಾರೆ.

ಕ್ರಿಸ್‌ಗೇಲ್, ಡಿವಿಲಿಯರ್ಸ್‌ರಂತಹ ಘಟಾನುಘಾಟಿ ಬ್ಯಾಟ್ಸ್‌ಮನ್‌ಗಳಿದ್ದರೂ ಕೂಡ ಈಗಾಗಲೇ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್9ರ ಪ್ರಮುಖ ಘಟ್ಟವನ್ನು ಏರಬೇಕಾದರೆ ನಾಯಕ ವಿರಾಟ್ ಕೊಹ್ಲಿ ಅವರ ಪಾತ್ರ ಅಮೋಘವಾಗಿದ್ದು ಉಳಿದ ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ಆಟಗಾರರು ಎಚ್ಚೆತ್ತುಕೊಳ್ಳುವಂತಾಗಲಿ.

Write A Comment