ಕರ್ನಾಟಕ

ಎಂಟನೆ ತರಗತಿ ವಿದ್ಯಾರ್ಥಿನಿಯನ್ನು ಆಟೋದಲ್ಲಿ ಅಪಹರಿಸಿ ಅತ್ಯಾಚಾರ

Pinterest LinkedIn Tumblr

rapeಚನ್ನಪಟ್ಟಣ, ಮೇ 5- ಬಾಲಕಿಯನ್ನು ಆಟೋದಲ್ಲಿ ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾದಾಪುರದ ಎಂಟನೆ ತರಗತಿ ವಿದ್ಯಾರ್ಥಿನಿಯನ್ನು ಮೇ 1ರಂದು ಅಂಬಾಡಿಹಳ್ಳಿಯ ಆಟೋ ಚಾಲಕ ನಾಗರಾಜ್ ಎಂಬಾತ ಅಪಹರಿಸಿ ಬೇರೆ ಕಡೆ ಕರೆದೊಯ್ದು ಅತ್ಯಾಚಾರವೆಸಗಿ ನಿನ್ನೆ ಗ್ರಾಮಕ್ಕೆ ಬಿಟ್ಟು ಹೋಗಿದ್ದಾನೆ.

ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ ನಡೆದ ಘಟನೆಯನ್ನು ಪೋಷಕರಿಗೆ ಹೇಳಿದ್ದಾಳೆ. ಪೋಷಕರು ಅಕ್ಕೂರು ಪೊಲೀಸರಿಗೆ ದೂರು ನೀಡಿದ್ದು, ಇನ್ಸ್‌ಪೆಕ್ಟರ್ ಸದಾನಂದ ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ನಾಗರಾಜ್‌ಗಾಗಿ ಶೋಧ ಮುಂದುವರೆದಿದೆ.

Write A Comment