ಅಂತರಾಷ್ಟ್ರೀಯ

ಅಮೆರಿಕ ದಾಳಿಯಲ್ಲಿ ಭಾರತ ಮೂಲದ ಐಎಸ್‌ಐಎಸ್ ಉಗ್ರ ನೀಲ್ ಪ್ರಕಾಶ್ ಸಾವು

Pinterest LinkedIn Tumblr

neelಮೆಲ್ಬೋರ್ನ್, ಮೇ 5- ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗೆ (ಐಎಸ್‌ಐಎಸ್) ಯುವಕರನ್ನು ಸೇರ್ಪಡೆ ಮಾಡುತ್ತಿದ್ದ ಆಸ್ಟ್ರೇಲಿಯಾದ ಮೋಸ್ಟ್ ವಾಂಟೆಡ್ ಕಟ್ಟಾ ಉಗ್ರ ಭಾರತೀಯ ಮೂಲದ ನೀಲ್ ಪ್ರಕಾಶ್ ಇರಾಕ್‌ನಲ್ಲಿ ನಡೆದ ಅಮೆರಿಕ ಸೇನಾ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆಸ್ಟ್ರೇಲಿಯದಲ್ಲಿ ನಡೆದ ಹಲವು ದಾಳಿಗಳಲ್ಲಿ ನೀಲ್ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದ. ಅಮೆರಿಕದಲ್ಲೂ ಲೋನ್-ವುಲ್ಫ್ ಅಟಾಕ್ಸ್‌ಗೆ ಇದೇ ನೀಲ್ ಪ್ರಕಾಶ್ ಸಂಚು ರೂಪಿಸಿದ್ದ.

ಭಾರತ ಮೂಲದ ನೀಲ್ ಪ್ರಕಾಶ್ ಮೆಲ್ಬೋರ್ನ್ ನಿವಾಸಿಯಾಗಿದ್ದ. ಏ.29ರಂದು ನಡೆದ ಅಮೆರಿಕ ಮಿಲಿಟರಿ ದಾಳಿಯಲ್ಲಿ ನೀಲ್ ಪ್ರಕಾಶ್ ಮೃತಪಟ್ಟಿದ್ದಾನೆ ಎಂದು ಅಟಾರ್ನಿ ಜನರಲ್ ಜಾರ್ಜ್ ಬ್ರ್ಯಾಂಡಿಸ್ ಹೇಳಿದ್ದಾರೆ. ನೀಲ್ ಪ್ರಕಾಶ್ ತಲೆಗೆ ಆಸ್ಟ್ರೇಲಿಯ ಭಾರೀ ಮೊತ್ತದ ಬಹುಮಾನ ಘೋಷಿಸಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ ಅನೇಕ ವಿಧ್ವಂಸಕ ಕೃತ್ಯಗಳಿಗೆ ಇವನೇ ರೂವಾರಿಯಾಗಿದ್ದ ಎಂದು ಹೇಳಲಾಗಿದೆ.

Write A Comment